Saturday, June 6, 2026
Homeಕರಾವಳಿಬಿ.ಕೆ. ಹರಿಪ್ರಸಾದ್ ಹೊರಗೆ ಹೋದಾಗ ರಾಮಭಕ್ತರು ಅವರ ಕೈ ಕಾಲು ಮುರಿಯಬಹುದು!:ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ....

ಬಿ.ಕೆ. ಹರಿಪ್ರಸಾದ್ ಹೊರಗೆ ಹೋದಾಗ ರಾಮಭಕ್ತರು ಅವರ ಕೈ ಕಾಲು ಮುರಿಯಬಹುದು!:ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಕ್ರೋಶ

- Advertisement -
- Advertisement -

ಬೆಂಗಳೂರು: ದೇಶದ ನಂಬರ್ ಒನ್ ಭಯೋತ್ಪಾದಕ ಬಿ.ಕೆ. ಹರಿ ಪ್ರಸಾದ್ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಧ್ರಾ ರೈಲು ದುರಂತದ ಮಾದರಿಯಲ್ಲೇ ಘಟನೆಗಳು ನಡೆಯಬಹುದು ಎಂಬ ಹರಿಪ್ರಸಾದ್ ಹೇಳಿಕೆಗೆ ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿರುವ ಸದಾನಂದ ಗೌಡ, ಬಿ.ಕೆ. ಹರಿಪ್ರಸಾದ್ ರಿಗೆ ಮೊದಲು ರಕ್ಷಣೆ ಕೊಡಬೇಕು, ಯಾಕೆಂದರೆ ರಾಮ ಭಕ್ತರು ಅವರನ್ನೇ ಪುಡಿ ಪುಡಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಪ್ರಚೋದನಾತ್ಮಕ ಹೇಳಿಕೆ ಕೊಟ್ಟು ರಾಮಭಕ್ತರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿರುವ ಸದಾನಂದ ಗೌಡ, ಬಿ.ಕೆ. ಹರಿಪ್ರಸಾದ್ ರನ್ನು ತಕ್ಷಣ ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ಹರಿಪ್ರಸಾದ್ ಹೊರಗೆ ಹೋದಾಗ ರಾಮ ಭಕ್ತರು ಅವರ ಕೈ ಕಾಲು ಮುರಿಯಬಹುದು ಎಂದೂ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಹೋಗುವವರಿಗೆ ರಕ್ಷಣೆ ಕೊಡಬೇಕು, ಗೋಧ್ರಾ ರೈಲು ದುರಂತದ ಮಾದರಿಯಲ್ಲಿ ಘಟನೆಗಳು ನಡೆಯುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಬೆಂಗಳೂರಿನಲ್ಲಿ ಇಂದು ವಿಧಾ‌ನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದರು.

- Advertisement -

Latest News

error: Content is protected !!