Thursday, June 4, 2026
Homeಅಪರಾಧಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಲಾರಿ; ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ಭಯಾನಕ ದೃಶ್ಯ

ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಲಾರಿ; ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ಭಯಾನಕ ದೃಶ್ಯ

- Advertisement -
- Advertisement -

ಮುಲ್ಕಿ ಲಾರಿಯೊಂದು ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಘಟನೆಯು ಮುಲ್ಕಿಯಲ್ಲಿ ನಡೆದಿದ್ದು, ಈ ಅಪಘಾತದಿಂದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಟೋ ರಿಕ್ಷಾ ವೊಂದಕ್ಕೆ ಹಾನಿಯಾಗಿದೆ.  

ಈ ಘಟನೆಗೆ ಪ್ರಮುಖ ಕಾರಣ ಚಾಲಕನ ನಿರ್ಲಕ್ಷತನವಾಗಿದ್ದು, ಮೈನ್ಸ್ ಲಾರಿ ಹೆದ್ದಾರಿ ಬಿಟ್ಟು ಸೀದಾ ಸರ್ವಿಸ್ ರಸ್ತೆಗೆ ನುಗ್ಗಿದ್ದು, ಅಲ್ಲೇ ಇದ್ದಂತಹ ಬೈಕ್ ಹಾಗೂ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ.

ಲಾಡ್ಜ್ ಒಂದರಲ್ಲಿ ವಾಚ್‌ಮೆನ್ ಆಗಿರುವ ಸಂಗಪ್ಪ ಮಗಳನ್ನು ಬಸ್ ಸ್ಟಾಂಡ್ ಗೆ ಬಿಡಲು ಬಂದಿದ್ದು ಲಾರಿ ಗುದ್ದಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಮಗಳು ಸವಿತಾಗೆ ಸಣ್ಣ ಪುಟ್ಟ ಗಾಯ ಅಪಾಯದಿಂದ ಪಾರಾಗಿದ್ದಾರೆ.

ಇನ್ನು ರಸ್ತೆ ಬದಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರತ್ತವೂ ಲಾರಿ ನುಗ್ಗಿದ್ದು, ಕೂದಲೆಳೆ ಅಂತರದಿಂದ ಕೂಲಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಕರ್ತವ್ಯದಲ್ಲಿದ್ದ ಮಹಿಳೆ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ.

ಮುಲ್ಕಿ ಠಾಣಾ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!