Monday, June 29, 2026
Homeಕರಾವಳಿಉಚ್ಚಿಲದಲ್ಲಿ ಚರಂಡಿಗೆ ಬಿದ್ದಿದ್ದ ಕಾಡುಕೋಣ ರಕ್ಷಣೆ

ಉಚ್ಚಿಲದಲ್ಲಿ ಚರಂಡಿಗೆ ಬಿದ್ದಿದ್ದ ಕಾಡುಕೋಣ ರಕ್ಷಣೆ

- Advertisement -
- Advertisement -

ಉಡುಪಿ: ಚರಂಡಿಗೆ ಬಿದ್ದಿದ್ದ ಕಾಡುಕೋಣವೊಂದನ್ನು ಉಚ್ಚಿಲದಲ್ಲಿ ರಕ್ಷಣೆ ಮಾಡಲಾಗಿದೆ. ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಚರಂಡಿಗೆ ಬಿದ್ದಿದ್ದ ಕಾಡುಕೋಣವನ್ನು ಮೇಲೆತ್ತಿ ರಕ್ಷಿಸಲಾಗಿದೆ.

ಕಾಡುಕೋಣ ಚರಂಡಿಗೆ ಬಿದ್ದಿರುವುದನ್ನು ನೋಡಿದ್ದ ದೇವಸ್ಥಾನ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು‌. ನಿನ್ನೆ ರಾತ್ರಿಯಿಂದ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ, ಜೆಸಿಬಿ ಬಳಸಿ ಕಾಡುಕೋಣ ಬಿದ್ದಿದ್ದ ಚರಂಡಿಯ ಹೊಂಡದ ಸುತ್ತಲಿನ ಮಣ್ಣು ತೆಗೆದು ರಕ್ಷಣೆ ಮಾಡಿದೆ. ರಕ್ಷಣೆ ಮಾಡಲ್ಪಟ್ಟ ಕಾಡುಕೋಣ ಸುಮಾರು ಆರು ವರ್ಷ ಪ್ರಾಯದ್ದು ಎಂದು ಹೇಳಲಾಗಿದೆ.

- Advertisement -

Latest News

error: Content is protected !!