Sunday, June 7, 2026
Homeಕರಾವಳಿಕಾಸರಗೋಡುಕಾಸರಗೋಡು: ಡೆತ್ ನೋಟ್ ಬರೆದಿಟ್ಟು ಬಿಎಡ್ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ

ಕಾಸರಗೋಡು: ಡೆತ್ ನೋಟ್ ಬರೆದಿಟ್ಟು ಬಿಎಡ್ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ

- Advertisement -
- Advertisement -

ಕಾಸರಗೋಡು: ಡೆತ್ ನೋಟ್ ಬರೆದಿಟ್ಟು ಬಿಎಡ್ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಪದ್ಯಾಣದಲ್ಲಿ ನಡೆದಿದೆ.ಪದ್ಯಾಣದ ಸಿಲ್ವೆಸ್ಟರ್ ಕ್ರಾಸ್ತಾ ಎಂಬವರ ಪುತ್ರ ಐವನ್ ಕ್ರಾಸ್ತಾ(23) ಮೃತ ವಿದ್ಯಾರ್ಥಿ.ಈತ ಮಂಗಳೂರಿನ ತೊಕ್ಕೊಟ್ಟುವಿನ ಕಾಲೇಜೊಂದರ ಬಿಎಡ್ ವಿದ್ಯಾರ್ಥಿಯಾಗಿದ್ದ. ಮಂಗಳವಾರ ಮನೆಯಿಂದ ನಾಪತ್ತೆಯಾಗಿದ್ದ ಐವನ್ ರನ್ನು ಹುಡುಕಾಡಿದಾಗ ರಾತ್ರಿ ವೇಳೆ ಮನೆ ಸಮೀಪದ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ನಡುವೆ ಅವರ ಮಲಗುವ ಕೋಣೆಯೊಳಗೆ ಡೆತ್ ನೋಟ್ ಪತ್ತೆಯಾಗಿದ್ದು, ‘ನನ್ನ ಸಾವಿಗೆ ನಾನೇ ಕಾರಣಎಂದು ಬರೆದಿಟ್ಟಿದ್ದ ಎನ್ನಲಾಗಿದೆ.ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

 

- Advertisement -

Latest News

error: Content is protected !!