Monday, June 8, 2026
Homeಮನರಂಜನೆರಸಗೊಬ್ಬರದಂಗಡಿ ಮಾಲೀಕನ ಒಡತಿಯಾಗುತ್ತಿದ್ದಾರೆ ಪುಟ್ಟ ಗೌರಿ

ರಸಗೊಬ್ಬರದಂಗಡಿ ಮಾಲೀಕನ ಒಡತಿಯಾಗುತ್ತಿದ್ದಾರೆ ಪುಟ್ಟ ಗೌರಿ

- Advertisement -
- Advertisement -

ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಪುಟ್ಟ ಗೌರಿ ಅಂತಾನೇ ಫೇಮಸ್ ಆಗಿರುವ ನಟಿ ರಜನಿ ರಾಘವನ್. ಪುಟ್ಟ ಗೌರಿ ಅನ್ನೋ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮನೆಗಳಿಗೆ ಪರಿಚಯವಾದ ಈ ನಟಿ ರಾಜಹಂಸ ಅನ್ನೋ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ರು.ಆದ್ರೆ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ರಜನಿ.

ಯೆಸ್.. ದೂದ್ ಪೇಡಾ ದಿಗಂತ್ ಅವರು ನಟಿಸಲಿರುವ  ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಅನ್ನೋ ಸಿನಿಮಾದಲ್ಲಿ ದಿಗಂತ್ ಅವರು ರಸಗೊಬ್ಬರದಂಗಡಿಯ ಮಾಲೀಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ದಿಗಂತ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ ಕನ್ನಡತಿ ರಜನಿ ರಾಘವನ್. ಅಂದ್ಹಾಗೆ ಈ ಸಿನಿಮಾದಲ್ಲಿ ರಜನಿ ಮಲೆನಾಡ ಹುಡುಗಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಸದ್ಯ ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿಯಲ್ಲಿ ರಜನಿ ಅಭಿನಯಿಸುತ್ತಿದ್ದು ಅವರನ್ನು ಮತ್ತೊಮ್ಮೆ ಹಿರಿತೆರೆಯಲ್ಲಿ ನೋಡದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

- Advertisement -

Latest News

error: Content is protected !!