Thursday, June 4, 2026
Homeತಾಜಾ ಸುದ್ದಿಪಾಕಿಸ್ತಾನದ ಷೇರು ಮಾರುಕಟ್ಟೆ ಮೇಲೆ ಉಗ್ರರ ದಾಳಿ: 4 ಭಯೋತ್ಪಾದಕರು ಸೇರಿ 10 ಮಂದಿ ಸಾವು!

ಪಾಕಿಸ್ತಾನದ ಷೇರು ಮಾರುಕಟ್ಟೆ ಮೇಲೆ ಉಗ್ರರ ದಾಳಿ: 4 ಭಯೋತ್ಪಾದಕರು ಸೇರಿ 10 ಮಂದಿ ಸಾವು!

- Advertisement -
- Advertisement -

ಕರಾಚಿ: ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ಮಾರುಕಟ್ಟೆ (ಪಾಕಿಸ್ತಾನ ಸ್ಟಾಕ್​ ಎಕ್ಸ್​​ಚೇಂಜ್ ಲಿಮಿಟೆಡ್​) ಕಟ್ಟಡದ ಮೇಲೆ ಉಗ್ರರ ದಾಳಿಯಾಗಿದ್ದು, ಇದರಲ್ಲಿ ಭಯೋತ್ಪಾದಕರೂ ಸೇರಿ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ನಾಲ್ವರು ಶಸ್ತ್ರಧಾರಿ ಉಗ್ರರು ಷೇರು ಮಾರುಕಟ್ಟೆ ಮೇಲೆ ಗುಂಡು ಹಾಗೂ ಗ್ರೆನೇಡ್​ ದಾಳಿ ನಡೆಸಿದ್ದಾರೆ. ಅಲ್ಲಿನ ನಾಲ್ವರು ಸೆಕ್ಯೂರಿಟಿ ಗಾರ್ಡ್​ ಹಾಗೂ ಓರ್ವ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

ಗ್ರೆನೇಡ್ ಮತ್ತು ಗನ್ ಹೊಂದಿದ್ದ ಉಗ್ರರು ಕಾರಿನಲ್ಲಿ ಆಗಮಿಸಿದ್ದು, ಭದ್ರತಾ ವ್ಯವಸ್ಥೆಯನ್ನು ಮುರಿದು ಷೇರು ಮಾರುಕಟ್ಟೆಯ ಕಟ್ಟಡದೊಳಗೆ ನುಸುಳಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಉಗ್ರರ ಗುಂಡಿನ ದಾಳಿಯಿಂದ ಕಟ್ಟಡದಲ್ಲಿದ್ದ ಎಲ್ಲರೂ ಭಯಭೀತರಾಗಿದ್ದಾರೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!