Saturday, June 6, 2026
Homeಕರಾವಳಿಸುಳ್ಯ;ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ಕಬಡ್ಡಿ ಆಟಗಾರ ಸಾವು

ಸುಳ್ಯ;ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ಕಬಡ್ಡಿ ಆಟಗಾರ ಸಾವು

- Advertisement -
- Advertisement -

ಸುಳ್ಯ; ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ಕಬಡ್ಡಿ ಆಟಗಾರನೊಬ್ಬ ಸಾವನ್ನಪ್ಪಿರುವ ಘಟನೆ ಅಮರಪಡ್ನೂರು ಗ್ರಾಮದ ಚಿಕ್ಕಿನಡ್ಕ ಗ್ರಾಮದಲ್ಲಿ ನಡೆದಿದೆ.ಉಮೇಶ್ ಅಲಿಯಾಸ್ ಕಾಶಿ (24 ) ಮೃತ ದುರ್ದೈವಿ.

ಕಳೆದ ಎಂಟು ತಿಂಗಳ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಗಿಡಗಳಿಗೆ ಔಷಧಿ ಸಿಂಪಡಿಸುತ್ತಿದ್ದಾಗ ಉಮೇಶ್ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದುದರಿಂದ ಉಮೇಶ್ ಮಲಗಿದಲ್ಲೇ ಇದ್ದರು.

ಒಂದು ವಾರದ ಹಿಂದೆ ಅವರಿಗೆ ಅನಾರೋಗ್ಯ ಉಲ್ಬಣಗೊಂಡಿದ್ದು ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೃತರು ತಂದೆ ಬಾಬು ಸಹೋದರ ನಾಗೇಶ್ ಚಿಕ್ಕಿನಡ್ಕ ಮತ್ತು ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!