Wednesday, June 24, 2026
Homeತಾಜಾ ಸುದ್ದಿಶಿವಾಜಿ‌ ಮಹಾರಾಜ ಇರದಿದ್ದರೆ ನಾವ್ಯಾರೂ ಹಿಂದುಗಳಾಗಿ ಇರಲು ಸಾಧ್ಯವಾಗ್ತಿರಲಿಲ್ಲ:ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ

ಶಿವಾಜಿ‌ ಮಹಾರಾಜ ಇರದಿದ್ದರೆ ನಾವ್ಯಾರೂ ಹಿಂದುಗಳಾಗಿ ಇರಲು ಸಾಧ್ಯವಾಗ್ತಿರಲಿಲ್ಲ:ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ

- Advertisement -
- Advertisement -

ಬಾಗಲಕೋಟೆ: ಶಿವಾಜಿ ಮಹಾರಾಜರು ಇರಲಿಲ್ಲ ಅಂದಿದ್ದರೆ ನಾವೆಲ್ಲಾ ಹಿಂದೂಗಳಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಶಿವಾಜಿ ಮೂರ್ತಿ ತೆರವುಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಶಿವಾಜಿ ಮಹಾರಾಜರು ಇಲ್ಲ ಅಂದಿದ್ದರೆ ನಾವೆಲ್ಲಾ ಹಿಂದೂಗಳಾಗಿ ಇರೋಕೆ ಸಾಧ್ಯವಿರಲಿಲ್ಲ, ಎಲ್ಲಾ ಕಟ್ ಆಗಿ ಹೋಗುತ್ತಿತ್ತು, ಎಲ್ಲಾ ಪೀಸ್ ಪೀಸ್ ಮಾಡಿ ಇಟ್ಟಿರುತ್ತಿದ್ದರು ಎಂದು ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದಲ್ಲಿ ಇದ್ದಿದ್ದಕ್ಕೆ ನಾವೆಲ್ಲಾ ಹಿಂದೂಗಳಾಗಿ ಉಳಿದ್ದಿದ್ದೇವೆ, ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರಿಗೆ ಅವಮಾನ ಮಾಡುವುದರಿಂದ ಮುಸಲ್ಮಾನರ ಓಟು ನಮಗೆ ಬರುತ್ತದೆ ಅನ್ನೋ ಭ್ರಮೆಯಲ್ಲಿ ಇದ್ದಾರೆ, ಕಾಂಗ್ರೆಸ್ ನವರನ್ನು ದೇಶದ್ರೋಹಿಗಳಿಗೆ ಬೆಂಬಲ ಕೊಡುವ ವ್ಯಕ್ತಿಗಳು ಎಂದು ಹೇಳುತ್ತೇನೆ ಅಂತಾ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಯಾರು ರಾಷ್ಟ್ರ ದ್ರೋಹಿಗಳಿದ್ದಾರೋ ಅಂತಹವರಿಗೆ ಬೆಂಬಲ ಕೊಡುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿರುವ ಕೆ.ಎಸ್. ಈಶ್ವರಪ್ಪ,
ಶಿವಾಜಿ ಮಹಾರಾಜರ ರೋಮಕ್ಕೂ ಸಮ ಇಲ್ಲ ಈ ಕಾಂಗ್ರೆಸ್ ನವರು ಎಂದು ಕಿಡಿಕಾರಿದ್ದಾರೆ.

- Advertisement -

Latest News

error: Content is protected !!