Wednesday, June 24, 2026
Homeತಾಜಾ ಸುದ್ದಿಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ:ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ....

ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ:ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ

- Advertisement -
- Advertisement -

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಮಾಡಲು ಒತ್ತಾಯ ಮಾಡುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಡಾ. ಪರಮೇಶ್ವರ್, ಮರು ತನಿಖೆ ಮಾಡಲು‌ ಒತ್ತಾಯ ಮಾಡುತ್ತಿದ್ದು ಪರ ಮತ್ತು ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ ನಾವು ಕೂಡ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.‌

ಅಲ್ಲದೇ ಕೋರ್ಟ್ ಗೆ ಕೂಡ ಹೋಗಿದ್ದು, ಕೋರ್ಟ್ ಏನು ಆದೇಶ ಕೋಡುತ್ತದೋ ನೋಡೋಣ, ನಾವು ಏನೋ ಮಾಡಲು‌ ಹೋಗುವುದು ನಂತರ ಕೋರ್ಟ್ ನಲ್ಲಿ ಇನ್ನೊಂದು ಆದೇಶ ಬರುವುದು ಬೇಡ ಎಂದು ಗೃಹ ಸಚಿವರು ಹೇಳಿದ್ದಾರೆ.

ಇದರ ಜೊತೆಗೆ ಕೋರ್ಟ್ ಯಾವ ರೀತಿಯಲ್ಲಿ ನ್ಯಾಯ ಕೋಡುತ್ತದೆ ಅಂತ ನೋಡೋಣ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.

- Advertisement -

Latest News

error: Content is protected !!