Sunday, June 7, 2026
Homeತಾಜಾ ಸುದ್ದಿಕಾರ್ಯಕರ್ತರನ್ನು ಬಿಡದಿದ್ದರೆ ನಾನು ಒಳಗೆ ಹೋಗುವುದಿಲ್ಲ: ಮೈಸೂರು ಏರ್ ಪೋರ್ಟ್ ನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್...

ಕಾರ್ಯಕರ್ತರನ್ನು ಬಿಡದಿದ್ದರೆ ನಾನು ಒಳಗೆ ಹೋಗುವುದಿಲ್ಲ: ಮೈಸೂರು ಏರ್ ಪೋರ್ಟ್ ನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಪಟ್ಟು

- Advertisement -
- Advertisement -

ಮೈಸೂರು: ನನ್ನ ಕಾರ್ಯಕರ್ತರನ್ನು ವಿಮಾನ ನಿಲ್ದಾಣದ ಒಳಗೆ ಬಿಡದಿದ್ದರೆ ನಾನು ಒಳಗೆ ಹೋಗುವುದಿಲ್ಲ ಎಂದು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಪಟ್ಟು ಹಿಡಿದ ಘಟನೆ ನಡೆದಿದೆ.

ಮಂಡಕಳ್ಳಿಯಲ್ಲಿರುವ ಮೈಸೂರು ಮೈಸೂರು ವಿಮಾನ ನಿಲ್ದಾಣದ ಮುಖ್ಯ ದ್ವಾರದ ಬಳಿ ಈ ಘಟನೆ ನಡೆದಿದೆ.

ಇಂದು ಡಿಸಿಎಂ ಡಿ. ಕೆ. ಶಿವಕುಮಾರ್ ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಭೇಟಿಗೆ ಕಾರ್ಯಕರ್ತರ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್ ಏರ್ ಪೋರ್ಟ್ ಗೆ ಆಗಮಿಸಿದ್ದರು.

ಈ ವೇಳೆ ವಿಮಾನ ನಿಲ್ದಾಣದ ಒಳಗೆ ಕಾರ್ಯಕರ್ತರನ್ನು ಬಿಡಲು ಪೊಲೀಸರು ನಿರಾಕರಿಸಿದರು. ಆಗ ಏರ್ ಪೋರ್ಟ್ ಹೊರಗೆ ನಿಂತ ದರ್ಶನ್ ಧ್ರುವನಾರಾಯಣ್ ಕಾರ್ಯಕರ್ತರನ್ನು ಕೂಡಾ ತನ್ನೊಂದಿಗೆ ಒಳಗೆ ಬಿಡುವಂತೆ ಪಟ್ಟು ಹಿಡಿದರು.

ಕೊನೆಗೆ ಕಾರ್ಯಕರ್ತರಿಗೆ ಕೂಡಾ ಪೊಲೀಸರು ಒಳಗೆ ಪ್ರವೇಶಿಸಲು ಅವಕಾಶ ನೀಡಿದ ಬಳಿಕ ಕಾರ್ಯಕರ್ತರ ಜೊತೆ ಶಾಸಕ ದರ್ಶನ್ ಧೃವನಾರಾಯಣ್ ಏರ್ ಪೋರ್ಟ್ ಒಳಗೆ ತೆರಳಿದರು.

- Advertisement -

Latest News

error: Content is protected !!