Sunday, June 7, 2026
Homeತಾಜಾ ಸುದ್ದಿಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗೆ ಸ್ಥಳದಲ್ಲೇ 60 ಸಾವಿರ ರೂ. ವೆಚ್ಚದ ವಿಮಾನದ ಟಿಕೆಟ್ ಬುಕ್ ಮಾಡಿಸಿಕೊಟ್ಟ...

ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗೆ ಸ್ಥಳದಲ್ಲೇ 60 ಸಾವಿರ ರೂ. ವೆಚ್ಚದ ವಿಮಾನದ ಟಿಕೆಟ್ ಬುಕ್ ಮಾಡಿಸಿಕೊಟ್ಟ ಸಚಿವ ಜಮೀರ್ ಅಹಮದ್!

- Advertisement -
- Advertisement -

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿದ್ದ ಕ್ರೀಡಾ ವಿದ್ಯಾರ್ಥಿಗೆ ಸ್ಥಳದಲ್ಲೇ ವಿಮಾನದ ಟಿಕೆಟ್ ಬುಕ್ ಮಾಡಿಸಿಕೊಟ್ಟು ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಪ್ರೋತ್ಸಾಹ ನೀಡಿದ್ದಾರೆ.

ಸಚಿವ ಜಮೀರ್ ಅಹಮದ್ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದ ವೇಳೆ ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್ ತಮ್ಮ ಆರ್ಥಿಕ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು.

ಸೆಪ್ಟೆಂಬರ್ 19 ರಿಂದ 24 ವರೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಫರ್ಧೆಗೆ ವಿದ್ಯಾರ್ಥಿ ತಾಹೀರ್ ಅಮೀರ್ ಆಯ್ಕೆಯಾಗಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಸ್ಪರ್ಧೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು.

ತಕ್ಷಣ ಸಚಿವ ಜಮೀರ್ ಅಹಮದ್ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಕ್ರೀಡಾ ವಿದ್ಯಾರ್ಥಿ ತಾಹೀರ್ ಅಮೀರ್ ಗೆ ಸ್ಫರ್ಧೆಗೆ ಹೋಗಿ ಬರುವ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದರು.

ಜಕಾರ್ತಾಗೆ ಹೋಗಿ ಬರುವ ವಿಮಾನ ವೆಚ್ಚ 60 ಸಾವಿರ ರೂಪಾಯಿಯ ಟಿಕೆಟ್ ವ್ಯವಸ್ಥೆ ಮಾಡಿಸಿ ಸ್ಥಳದಲ್ಲೇ ವಿದ್ಯಾರ್ಥಿ ತಾಹೀರ್ ಅಮೀರ್ ಗೆ ನೀಡಿ ಸಚಿವ ಜಮೀರ್ ಅಹಮದ್ ಶುಭ ಹಾರೈಸಿದರು‌.

- Advertisement -

Latest News

error: Content is protected !!