Wednesday, June 3, 2026
Homeಕರಾವಳಿಉಡುಪಿಇಂದು ಬೆಂಗಳೂರಿನಲ್ಲಿ ಅಡಿಕೆ ಬೆಳೆ ಪ್ರದೇಶದ ಶಾಸಕರ ಸಭೆ

ಇಂದು ಬೆಂಗಳೂರಿನಲ್ಲಿ ಅಡಿಕೆ ಬೆಳೆ ಪ್ರದೇಶದ ಶಾಸಕರ ಸಭೆ

- Advertisement -
- Advertisement -

ಬೆಂಗಳೂರು: ರಾಜ್ಯದ ಅಡಿಕೆ ಬೆಳೆ ಬೆಳೆಯುವ ಪ್ರದೇಶಗಳನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಪ್ರತಿನಿಧಿಸುವ ಜನಪ್ರತಿನಿಧಿಗಳ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.ಶಾಸಕರ ಭವನ ಕಟ್ಟಡ 2 ರಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಭೆ ನಡೆಯಲಿದೆ.

ರಾಜ್ಯದಲ್ಲಿ ಅಡಿಕೆ ಬೆಳೆಯುವ ರೈತರು ಎದುರಿಸುತ್ತಿರುವ ಎಲೆ ಚುಕ್ಕಿ ರೋಗ, ಅಡಿಕೆ ಆಮದು ಹಾಗೂ ಅಡಿಕೆ ಬೆಲೆ ಏರಿಳಿತ ಸಮಸ್ಯೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ತೀರ್ಥಹಳ್ಳಿ ಶಾಸಕ ಮತ್ತು ಮಾಜಿ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ ನಡೆಯಲಿದೆ.

- Advertisement -

Latest News

error: Content is protected !!