Saturday, June 6, 2026
HomeUncategorizedಕಾಸರಗೋಡಿನಲ್ಲಿ 7 ಪೊಲೀಸರು ಕೆಲಸದಿಂದ ವಜಾ

ಕಾಸರಗೋಡಿನಲ್ಲಿ 7 ಪೊಲೀಸರು ಕೆಲಸದಿಂದ ವಜಾ

- Advertisement -
- Advertisement -

ಕಾಸರಗೋಡಿನಲ್ಲಿ 7 ಪೊಲೀಸರು ಕೆಲಸದಿಂದ ವಜಾಗೊಳಿಸಲಾಗಿದೆ. ಮರಳು ಮಾಫಿಯಾದೊಂದಿಗೆ ನಂಟು ಆರೋಪದಲ್ಲಿ ಕಾಸರಗೋಡಿನ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಕೆಲಸದಿಂದ ತೆಗೆಯಲಾಗಿದೆ.

ಕಾಸರಗೋಡು ಚಂದೇರಾ ಪೊಲೀಸ್‌ ಠಾಣೆಯ ಟಿ.ಎಂ. ಅಬ್ದುಲ್‌ ರಶೀದ್‌ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್‌, ಗ್ರೇಡ್‌ ಎಸ್‌ಐಗಳಾದ ಕಣ್ಣೂರು ರೂರಲ್‌ನ ಸಿ. ಗೋಕುಲನ್‌, ಕಲ್ಲಿಕೋಟೆ ರೂರಲ್‌ನ ಪಿ. ಜೋಯಿ ಥೋಮಸ್‌, ಸಿವಿಲ್‌ ಪೊಲೀಸ್‌ ಆಫೀಸರ್‌ಗಳಾದ ಪಿ.ಎ. ನಿಸಾರ್‌, ಎಂ.ವೈ. ಶಿಬಿನ್‌ ಮತ್ತು ಪಿ.ಎ. ಶಜೀರ್‌ ಸೇವೆಯಿಂದ ವಜಾಗೊಂಡವರು.

ಈ 7 ಮಂದಿ ತ್ರಿಶೂರು ಠಾಣೆಯಲ್ಲಿದ್ದಾಗ ಮರಳು ಮಾಫಿಯಾ ದೊಂದಿಗೆ ನಿಕಟ ನಂಟು ಬೆಳೆಸಿ ಅವರಿಗೆ ಅಕ್ರಮ ಮರಳು ಸಾಗಾಟಕ್ಕೆ ಅಗತ್ಯ ಸಹಾಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಯಲ್ಲಿ ಅವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಅವರನ್ನು ಕೆಲಸದಿಂದ ತೆಗೆಯಲಾಗಿದೆ.

- Advertisement -

Latest News

error: Content is protected !!