Thursday, June 4, 2026
Homeಮನರಂಜನೆಲಾಕ್ ಡೌನ್ ಮುಗಿಯುತ್ತಿದ್ದಂತೆ ಸಣ್ಣದೊಂದು ಪ್ರವಾಸ ಮುಗಿಸಿದ ಐಂದ್ರಿತಾ ಹಾಗೂ ದಿಗಂತ್

ಲಾಕ್ ಡೌನ್ ಮುಗಿಯುತ್ತಿದ್ದಂತೆ ಸಣ್ಣದೊಂದು ಪ್ರವಾಸ ಮುಗಿಸಿದ ಐಂದ್ರಿತಾ ಹಾಗೂ ದಿಗಂತ್

- Advertisement -
- Advertisement -

ಬೆಂಗಳೂರು : ಈ ಬಾರಿ ಲಾಕ್ ಡೌನ್ ನಿಂದಾಗಿ ಸಾಕಷ್ಟು ಅನಾನುಕೂಲಗಳಾದ್ರೂ ಹೆಚ್ಚಿನವರಿಗೆ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯೋದಕ್ಕೆ ಅವಕಾಶ ಸಿಕ್ಕಿದಂತಾಗಿದ್ದು ಮಾತ್ರ ಸುಳ್ಳಲ್ಲ. ಅದೆಷ್ಟೋ ಮಂದಿ ಇದೊಂದು ಒಳ್ಳೆಯ ಸಮಯ ಅಂದುಕೊಂಡು ಮನೆಯವರ ಜೊತೆ ಕಾಲ ಕಳೆದಿದ್ದಾರೆ.

ಅದರಲ್ಲೂ ಸದಾ ಬ್ಯುಸಿಯಾಗಿರುತ್ತಿದ್ದ ಅದೆಷ್ಟೋ ಸಿನಿಮಾ ತಾರೆಯರು ಸಿಕ್ಕಿದ್ದೇ ಛಾನ್ಸ್ ಅಂತಾ ಮನೆಯವರ ಜೊತೆ ಈಗಲೂ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಎಷ್ಟೋ ಸಿನಿ ತಾರೆಯರು ಲಾಕ್ ಡೌನ್ ಸಮಯದಲ್ಲಿ ಮನೆ ಬಿಟ್ಟು ಹೊರಗೆ ಬಂದಿಲ್ಲ. ಕೆಲವರಿಗಂತೂ ಲಾಕ್ ಡೌನ್ ಯಾವಾಗ ಮುಗಿಯುತ್ತೆ ಅಂತಾಗಿತ್ತು. ಈ ಲಾಕ್ ಡೌನ್ ಮುಗಿಯುತ್ತಿದ್ದಂತೆ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ದಂಪತಿ ಸಣ್ಣದೊಂದು ಪ್ರವಾಸ ಮುಗಿಸಿ ಬಂದಿದ್ದಾರೆ. ಐಂದ್ರಿತಾ ಹಾಗೂ ದಿಗಂತ್, ಐಂದ್ರಿತಾ ತಂದೆ ತಾಯಿಯೊಂದಿಗೆ ಕೊಡಗಿಗೆ ಪ್ರವಾಸ ಹೋಗಿ ಬಂದಿದ್ದಾರೆ. ಅಲ್ಲದೇ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ದಂಪತಿ ತಮ್ಮ ಪ್ರವಾಸವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

- Advertisement -

Latest News

error: Content is protected !!