Sunday, June 7, 2026
Homeತಾಜಾ ಸುದ್ದಿಶಕ್ತಿ ಯೋಜನೆಯ ಲಾಭ ಪಡೆಯಲು ಬುರ್ಖಾ ಧರಿಸಿ ಬಂದು ಸಿಕ್ಕಿ ಬಿದ್ದ ವ್ಯಕ್ತಿ

ಶಕ್ತಿ ಯೋಜನೆಯ ಲಾಭ ಪಡೆಯಲು ಬುರ್ಖಾ ಧರಿಸಿ ಬಂದು ಸಿಕ್ಕಿ ಬಿದ್ದ ವ್ಯಕ್ತಿ

- Advertisement -
- Advertisement -

ಹುಬ್ಬಳ್ಳಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಲಾಭ ಪಡೆಯಲು ವ್ಯಕ್ತಿಯೋರ್ವ ಬುರ್ಖಾ ಧರಿಸಿದ ಅನುಮಾನ ವ್ಯಕ್ತವಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬುರ್ಖಾ ಹಾಕಿದ ವ್ಯಕ್ತಿ ಪತ್ತೆಯಾಗಿದ್ದು, ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿಯಾಗಿರುವ ವೀರಭದ್ರಯ್ಯ ಎಂದು ಗುರುತಿಸಲಾಗಿದೆ.

ವೀರಭದ್ರಯ್ಯ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಹೀಗಾಗಿ ಶಕ್ತಿ ಯೋಜನೆಯ ಲಾಭ ಪಡೆಯಲು ಮುಂದಾಗಿರುವ ಅನುಮಾನ ವ್ಯಕ್ತವಾಗಿದೆ. ಆದರೆ ಭಿಕ್ಷಾಟನೆ ಮಾಡುವ ಉದ್ದೇಶದಿಂದಾಗಿ ತಾನು ಬುರ್ಖಾ ಧರಿಸಿದ್ದಾಗಿ ವೀರಭದ್ರಯ್ಯ ಹೇಳಿದ್ದಾನೆ.‌

ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ಭಿಕ್ಷಾಟನೆಗೆ ಬುರ್ಖಾ ಹಾಕಿರುವುದಾಗಿ ವೀರಭದ್ರಯ್ಯ‌ ಹೇಳಿದ್ದಾನೆ.‌

- Advertisement -

Latest News

error: Content is protected !!