Wednesday, June 3, 2026
Homeಕರಾವಳಿಸುಳ್ಯದ ಅನ್ನದಾತ ಎಂದೇ ಖ್ಯಾತಿಯ ಸುಂದರ ಸರಳಾಯ ನಿಧನ

ಸುಳ್ಯದ ಅನ್ನದಾತ ಎಂದೇ ಖ್ಯಾತಿಯ ಸುಂದರ ಸರಳಾಯ ನಿಧನ

- Advertisement -
- Advertisement -

ಸುಳ್ಯ: ಹೋಟೆಲ್ ಉದ್ಯಮ ನಡೆಸುತ್ತಿರುವ ಸುಂದರ ಸರಳಾಯರು ಅಸೌಖ್ಯದಿಂದ ಜೂ.27 ರಂದು ಸುಳ್ಯ ದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಹಲವು ವರ್ಷದಿಂದ ಸುಳ್ಯದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರು 10 ರೂಗೆ ಊಟ ನೀಡುತ್ತಿದ್ದರು.

ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಹೋಟೆಲ್ ಕುರಿತು..
ಇಂದಿನ ಕಾಲದಲ್ಲಿ 10 ರೂಪಾಯಿಗೆ ಒಂದು ಕಪ್ ಟೀ ಕೂಡ ಬರುವುದಿಲ್ಲ. ಅಂತಹುದರಲ್ಲಿ ಸುಳ್ಯದ ರಾಮ್ ಪ್ರಸಾದ್ ಹೋಟೆಲ್ ತನ್ನ ಗ್ರಾಹಕರಿಗೆ 10 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುತ್ತಿದೆ.

ಅಚ್ಚರಿಯೆಂದರೆ ಸುಳ್ಯದ ಶ್ರೀಯಮಪೇಟೆಯಲ್ಲಿ ವೆಂಕಟೇಶ ಸರಳಾಯ ಅವರು 78 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ರಾಮ್ ಪ್ರಸಾದ್ ಹೋಟೆಲ್‌ನಲ್ಲಿ 10.ರೂಗೆ ಊಟ ಸಿಗುತ್ತಿದೆ. ಈ ಹೋಟೆಲ್ ಸರಲಾಯ ಹೋಟೆಲ್ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ.

ಅನ್ನ, ಸಾಂಬಾರ್, ರಸಂ, ಪಳ್ಯ, ಮೊಸರನ್ನೊಳಗೊಂಡ ಭೋಜನವನ್ನು ಇಲ್ಲಿ ಸಿಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಹಸಿವು ನೀಗಿಸಿಕೊಳ್ಳುತ್ತಾರ
1938ರಲ್ಲಿ ಈ ಹೋಟೆಲ್ 25 ಪೈಸೆಗೆ ಊಟ ಕೊಡುತ್ತಿದೆ. 2014ರಲ್ಲಿ ಈ ಮೊತ್ತ ರೂ.5ಕ್ಕೆ ಏರಿತು. ಇದೀಗ ರೂ.10ಕ್ಕೆ ಊಟ ನೀಡುತ್ತಿದೆ. ಇದೀಗ ವೆಂಕಟೇಶ್ ಅವರ ಮಗ ಸುಂದರ ಸರಳಾಯ ಹೋಟೆಲ್ ಮುನ್ನಡೆಸುತ್ತಿದ್ದರು. ದಿನಕ್ಕೆ 200 ಮಂದಿ ಇಲ್ಲಿಗೆ ಆಗಮಿಸಿ ಊಟ ಸವಿಯುತ್ತಾರೆ.

- Advertisement -

Latest News

error: Content is protected !!