Thursday, June 4, 2026
Homeಇತರಅತೀ ವೇಗದ ಕಾರು ಚಾಲನೆಯಿಂದ ಅಪಘಾತ, ಧರ್ಮಸ್ಥಳಕ್ಕೆ ಹೊರಟಿದ್ದ ಇಬ್ಬರು ಸಾವು

ಅತೀ ವೇಗದ ಕಾರು ಚಾಲನೆಯಿಂದ ಅಪಘಾತ, ಧರ್ಮಸ್ಥಳಕ್ಕೆ ಹೊರಟಿದ್ದ ಇಬ್ಬರು ಸಾವು

- Advertisement -
- Advertisement -

ಚಿಕ್ಕಮಗಳೂರು : ಅತೀ ವೇಗವಾಗಿ ಕಾರು ಚಲಾಯಿಸಿದ್ದರ ಪರಿಣಾಮ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿ ಇಬ್ಬರೂ ಸ್ಥಳದಲ್ಲೇ ಸಾಪನ್ನಪ್ಪಿದ ಘಟನೆ ಚಿಕ್ಕಮಗಳೂರಿನ ಕರ್ತಿಕೆರೆ ಗ್ರಾಮದ ಬಳಿ ನಡೆದಿದೆ. ನಿನ್ನೆ ಮಧ್ಯರಾತ್ರಿ 1-30ರ ವೇಳೆಗೆ ಈ ಅಪಘಾತ ನಡೆದಿದೆ.

ಬೆಂಗಳೂರು ಮೂಲದ 30 ವರ್ಷದ ಮಂಜುನಾಥ್ ಹಾಗೂ 28 ವರ್ಷದ ಮುತ್ತುರಾಜ್ ಮೃತ ದುರ್ದೈವಿಗಳು. ಒಟ್ಟು ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಧರ್ಮಸ್ಥಳಕ್ಕೆ ತೆರಳುವುದಕ್ಕಾಗಿ ಬೆಂಗಳೂರಿನಿಂದ ಜೊತೆಯಾಗಿ ಹೊರಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!