Sunday, June 7, 2026
Homeತಾಜಾ ಸುದ್ದಿಫ್ರೀ ಬಸ್ ನಲ್ಲಿ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ; ನಾನು ಸಾಯ್ತೀನಿ ಅಂತಾ ಬಸ್...

ಫ್ರೀ ಬಸ್ ನಲ್ಲಿ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ; ನಾನು ಸಾಯ್ತೀನಿ ಅಂತಾ ಬಸ್ ನಡಿ ಬಿದ್ದು ಸಾಯಲು ಹೋದ ಪತಿ ಮಹಾಶಯ

- Advertisement -
- Advertisement -

ಬೆಂಗಳೂರು; ಫ್ರೀ ಬಸ್ ನಲ್ಲಿ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ನಾನು ಸಾಯ್ತೀನಿ ಅಂತಾ ಬಸ್ ನಡಿ ಬಿದ್ದು ಪತಿಯೊಬ್ಬ ಸಾಯಲು ಹೋಗಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.

ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ಧ ಗಂಟೆಗೂ ಹೆಚ್ಚು ಕಾಲ ಕಿರಿಕ್ ಮಾಡಿದ್ದಾನೆ. ಈತನ ಅವಾಂತರದಿಂದ ಬಸ್​ನಲ್ಲಿ‌ ಕುಳಿತ ಪ್ರಯಾಣಿಕರ ಪರದಾಡುವಂತಾಯಿತು.

ಸಿದ್ದರಾಮಯ್ಯ ಸರಿಯಿಲ್ಲ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕು ಎಂದು ಅಂತ ಪತಿರಾಯ ಆಕ್ರೋಶ ಹೊರ ಹಾಕಿದ್ದಾನೆ. ಕೊನೆಗೆ ಸ್ಥಳೀಯರು ಈತನನ್ನು ಬಸ್​ ಕೆಳಗಡೆಯಿಂದ ಹೊರಗೆ ಎಳೆದು ತಂದಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ‌ಒಪ್ಪಿಸಿದ್ದಾರೆ. ಈತನ ಅವಾಂತರವನ್ನು ಸಾರ್ವಜನಿಕರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.

- Advertisement -

Latest News

error: Content is protected !!