Tuesday, July 21, 2026
Homeಕರಾವಳಿಮಂಗಳೂರು: ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರು: ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು:ಇಲ್ಲಿನ ಖಾಸಗಿ ಕಾಲೇಜು ಬಳಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಕದ್ರಿ ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ತುಫೈಲ್ (20), ನೀರು ಮಾರ್ಗ ನಿವಾಸಿ ಮೊಹಮ್ಮದ್ ಅಫ್ರಿದ್ (19), ಮಕ್ಸುದ್ ಸಾಗ್ (21), ಬೋಳಾರ ನಿವಾಸಿ ಅಬ್ದುಲ್ ಸತ್ತಾರ್ (19) ಬಂಧಿತರು.

ಕಿನ್ನಿಗೋಳಿ ನಿವಾಸಿ ಯುವತಿಯೊಬ್ಬಳು ನಿದೀಶ್ ಎಂಬಾತನನ್ನು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕ ಮಾಡಿ ಮಾತನಾಡಲು ಕಾಲೇಜೊಂದರ ಬಳಿ ಮಾತನಾಡಲು ಬರುವಂತೆ ತಿಳಿಸಿದ್ದಾಳೆ.ಇದರಂತೆ ಅಲ್ಲಿಗೆ ನಿದೀಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದಾಗ ಕಾರಿನಲ್ಲಿ ಬಂದ ಯುವತಿ ಮತ್ತು ಆಕೆಯ ಜೊತೆಯಲ್ಲಿದ್ದ ನಾಲ್ವರು ಆರೋಪಿಗಳು ನಿದೀಶ್ ಮತ್ತು ಸ್ನೇಹಿತರ ಜತೆ ಗಲಾಟೆ ಮಾಡಿ ನಿದೀಶ್ ಎಂಬಾತನಿಗೆ ಚೂರಿಯಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ನಿದೀಶ್ ಸ್ನೇಹಿತ ನೀಲೆಶ್ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!