- Advertisement -
![]()
- Advertisement -
ಮಂಗಳೂರು : ರಾಜ್ಯ ಸರ್ಕಾರ 13 ಐ.ಪಿ.ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಆ ಪೈಕಿ ಮಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಡಾ.ಪಿ.ಎಸ್ ಹರ್ಷ ಅವರನ್ನು ಕೂಡ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹರ್ಷ ಅವರ ಜಾಗಕ್ಕೆ ವಿಕಾಶ್ ಕುಮಾರ್ ವಿಕಾಶ್ ಅವರನ್ನು ನೇಮಕ ಮಾಡಲಾಗಿದೆ. ಹರ್ಷ ಅವರನ್ನು ವಾರ್ತಾ ಇಲಾಖಾ ಕಮೀಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಮಂಗಳೂರಿನಲ್ಲಿ ನಡೆದ ಸಿಎಎ, ಎನ್ ಆರ್ ಸಿ ಗಲಭೆ ಸೇರಿದಂತೆ ಅನೇಕ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಗೆ ಹರ್ಷವರಿಗಿತ್ತು. ಇನ್ನು ಮಂಗಳೂರು ಪೊಲೀಸ್ ಕಮೀಷನರ್ ಆಗಿ ನೇಮಕಗೊಳ್ಳುವ ಮುನ್ನ ಹರ್ಷ ಅವರು ವಾರ್ತಾ ಇಲಾಖಾ ಕಮೀಷನರ್ ಆಗಿ ಕಾರ್ಯವನ್ನು ನಿರ್ವಹಿಸಿದ್ದರು. ಇದೀಗ ಮತ್ತೆ ಅವರನ್ನು ವಾರ್ತಾ ಇಲಾಖಾ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.
- Advertisement -


