Sunday, May 12, 2024
Homeತಾಜಾ ಸುದ್ದಿಸದ್ದಿಲ್ಲದೇ ತಮಿಳಿನ ಸ್ಟಾರ್ ನಟನೊಂದಿಗೆ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಎಂಗೇಜ್ ಮೆಂಟ್.. ಹೇಗಿದೆ ಗೊತ್ತಾ...

ಸದ್ದಿಲ್ಲದೇ ತಮಿಳಿನ ಸ್ಟಾರ್ ನಟನೊಂದಿಗೆ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಎಂಗೇಜ್ ಮೆಂಟ್.. ಹೇಗಿದೆ ಗೊತ್ತಾ ಆಮಂತ್ರಣ ಪತ್ರಿಕೆ?

spot_img
- Advertisement -
- Advertisement -

ಕೆಜಿಎಫ್​ ಸಿನಿಮಾದ ಮೂಲಕ  ಎಲ್ಲರ ಗಮನಸೆಳೆದ ನಟಿ ಶ್ರೀನಿಧಿ ಶೆಟ್ಟಿ, ಈಗ ಪರಭಾಷೆಯಲ್ಲೂ ಅತ್ಯಂತ ಬ್ಯುಸಿ ಇರುವ ನಟಿ. ಮೊದಲ ಸಿನಿಮಾದಲ್ಲೇ ಮೋಡಿ ಮಾಡಿದ ಈ ನಟಿ ಇದೀಗ ಪರಭಾಷೆ ನಟನೊಂದಿಗೆ  ಸದ್ದಿಲ್ಲದೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ!!

ಅರೇ! ಏನಿದು ಅಂತಾ ಯೋಚ್ನೆ ಮಾಡ್ತಿದ್ದೀರಾ? ಅವರು ವಿವಾಹವಾಗುತ್ತಿರೋದು  ರಿಯಲ್​ ಅಲ್ಲ ರೀಲ್​ನಲ್ಲಿ!  ಅಂದರೆ, ಕಾಲಿವುಡ್​ ಸ್ಟಾರ್ ನಟ ಚಿಯಾನ್ ವಿಕ್ರಂ ನಾಯಕತ್ವದಲ್ಲಿ ಕೋಬ್ರಾ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ವಿಕ್ರಂಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದು, ಇದೀಗ ಆ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದ್ದು, ದಿನಾಂಕ ಸಹ ನಿಗದಿ ಮಾಡಿದೆ. ಅಂದಹಾಗೆ, ಆ ಹಾಡು ನಾಯಕ ಮತ್ತು ನಾಯಕಿಯ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಹಾಡಿನ ಬಿಡುಗಡೆಗೆಂದೇ ವಿಶೇಷ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.

ಅಜಯ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೋಬ್ರಾ ಚಿತ್ರದ ‘ತುಂಬಿ ತುಳ್ಳಾಲ್​..’ ಸಾಹಿತ್ಯ ಸಾಲುಗಳುಳ್ಳ ಗೀತೆಗೆ ಎ. ಆರ್ ರೆಹಮಾನ್​ ಸಂಗೀತ​ ನೀಡಿದ್ದು, ಜೂ. 29ರ ಸೋಮವಾರ ಸಂಜೆ 5 ಗಂಟೆಗೆ ಸೋನಿ ಮ್ಯೂಸಿಕ್​ನಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಶೇ. 70 ಶೂಟಿಂಗ್​ ಮುಗಿದಿದ್ದು, ಲಾಕ್​ಡೌನ್​ ಮತ್ತಷ್ಟು ಸಡಿಲಾಗುತ್ತಿದ್ದಂತೆ ಬಾಕಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

- Advertisement -
spot_img

Latest News

error: Content is protected !!