Saturday, June 6, 2026
Homeಮನರಂಜನೆರೌಡಿ ಬೇಬಿ ಕೈಯಲ್ಲಿ ಹೊಡಿಸಿಕೊಳ್ಳುವಂತಹ ತಪ್ಪೇನು ಮಾಡಿದ್ರು ನಟ ಶ್ರೀಮುರಳಿ ?

ರೌಡಿ ಬೇಬಿ ಕೈಯಲ್ಲಿ ಹೊಡಿಸಿಕೊಳ್ಳುವಂತಹ ತಪ್ಪೇನು ಮಾಡಿದ್ರು ನಟ ಶ್ರೀಮುರಳಿ ?

- Advertisement -
- Advertisement -

ಸಿನಿಮಾ ತಾರೆಯರಿಗೆ ಒಂದು ಚೂರು ಸಮಯ ಸಿಕ್ಕರೆ ಸಾಕು ಅವರು ಕುಟುಂಬದೊಂದಿಗೆ ಸಮಯ ಕಳೆಯೋದಕ್ಕೆ ಇಷ್ಟಪಡುತ್ತಾರೆ. ಅದರಲ್ಲೂ ಲಾಕ್ ಡೌನ್ ಸಮಯದಲ್ಲಂತೂ ಬಹುತೇಕ ಕಲಾವಿದರು ಸಿಕ್ಕಿದ್ದೇ ಛಾನ್ಸ್ ಅಂತಾ ತಮ್ಮ ತಮ್ಮ ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಕೆಲವು ತಾರೆಯರು  ಅಪರೂಪದ ಕ್ಷಣಗಳ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ.

ಅದರಲ್ಲೂ ನಟ ಶ್ರೀಮುರಳಿ ಫ್ರೀ ಟೈಂ ಸಿಕ್ಕಾಗೆಲ್ಲಾ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಲೇ ಇರುತ್ತಾರೆ. ಶ್ರೀಮುರಳಿ ಅವರಿಗೆ ಮಗಳು ಅತೀವ ಅಂದ್ರೆ ಪಂಚಪ್ರಾಣ. ಅವರು ಯಾರಿಗೆ ಹೆದರುತ್ತಾರೋ ಗೊತ್ತಿಲ್ಲ. ಆದ್ರೆ ಮಗಳಿಗೆ ಮಾತ್ರ ಸಿಕ್ಕಾಪಟ್ಟೆ ಹೆದರ್ತಾರಂತೆ. ಶ್ರೀಮುರಳಿ ಅವರಿಗೆ ಅವರ ಮಗಳು  ಕೆನ್ನೆಗೆ ಬಾರಿಸಿರೋ ಮುದ್ದಾದ ವಿಡಿಯೋ ಒಂದನ್ನು ಶ್ರೀಮುರಳಿ ಪತ್ನಿ, ವಿದ್ಯಾ ಶ್ರೀಮುರಳಿ ಅವರು ತಮ್ಮ ಇನ್ಸ್ಚಾ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.  ಅಲ್ಲದೇ ಮಗಳನ್ನು ರೌಡಿ ಬೇಬಿ ಅಂತಾ ಕರೆದಿದ್ದಾರೆ ವಿದ್ಯಾ. ಇದು ಹಳೆಯ ವಿಡಿಯೋವಾಗಿದ್ದು, ಸೋಶಿಯಲ್ ಮೀಡಿಯಾದಲ್ಲೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

- Advertisement -

Latest News

error: Content is protected !!