Saturday, June 6, 2026
Homeಕರಾವಳಿಕಡಬ;  ರೆಂಜಿಲಾಡಿಯಲ್ಲಿ ಕುಸಿದು ಬಿದ್ದು ಕಾಲೇಜು ವಿದ್ಯಾರ್ಥಿನಿ ಸಾವು

ಕಡಬ;  ರೆಂಜಿಲಾಡಿಯಲ್ಲಿ ಕುಸಿದು ಬಿದ್ದು ಕಾಲೇಜು ವಿದ್ಯಾರ್ಥಿನಿ ಸಾವು

- Advertisement -
- Advertisement -

ಕಡಬ;   ಕಾಲೇಜು ರೆಂಜಿಲಾಡಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ನಡೆದಿದೆ. ರೆಂಜಿಲಾಡಿ ಗ್ರಾಮದ  ನಿಡ್ಮೇರು‌ ನಿವಾಸಿ ರವೀಂದ್ರ ಅವರ ಪುತ್ರಿ ಕು.ರಶ್ಮಿತಾ‌ (18) ಮೃತ ವಿದ್ಯಾರ್ಥಿನಿ.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ರಶ್ಮಿತಾ  ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ ಎನ್ನಲಾಗಿದೆ.

ಆರೋಗ್ಯವಾಗಿದ್ದ ರಶ್ಮಿತಾ ಗುರುವಾರ ರಾತ್ರಿ  ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಗಳನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!