Saturday, June 13, 2026
Homeಕರಾವಳಿಸಂಪ್ಯದಲ್ಲಿ ಮತ್ತೆ ತನ್ನ ವಕ್ರ ದೃಷ್ಟಿ ಬೀರಿದ ಕೊರೊನಾ

ಸಂಪ್ಯದಲ್ಲಿ ಮತ್ತೆ ತನ್ನ ವಕ್ರ ದೃಷ್ಟಿ ಬೀರಿದ ಕೊರೊನಾ

- Advertisement -
- Advertisement -

ಪುತ್ತೂರು : ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಂದರ ಹಿಂದೆ ಒಂದರಂತೆ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರೋದು ಪುತ್ತೂರಿನ ನಿವಾಸಿಗಳಲ್ಲಿ ಆತಂತಕ್ಕೆ ಕಾರಣವಾಗಿದೆ. ಇದೀಗ ಪುತ್ತೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ.

ಎರಡು ತಿಂಗಳ ಹಿಂದೆ ಪುತ್ತೂರಿನ ಸಂಪ್ಯದಲ್ಲಿ ದುಬೈನಿಂದ ಬಂದ ಇಬ್ಬರಲ್ಲಿ ಕೊರೊನಾ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಆ ಬಳಿಕ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಸಂಪ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಸಂಪ್ಯದ ಉದಯಗಿರಿ ನಿವಾಸಿಯೊಬ್ಬರಿಗೆ ಕೊರೊನಾ ಇರೋದು ದೃಢಪಟ್ಟಿದೆ.ಅಂದ್ಹಾಗೆ ಈ ವ್ಯಕ್ತಿ ಲಾಕ್ ಡೌನ್ ಬಳಿಕ ಮನೆಯಲ್ಲಿಯೇ ಇದ್ದು, ಇತ್ತೀಚೆಗೆ ಬೆಂಗಳೂರಿಗೆ ತೆರಳಿ ವಾಪಾಸ್ಸಾಗಿದ್ದರು. ಬಳಿಕ ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆ ಗಂಟಲು ದ್ರವ ಪರೀಕ್ಷಿಸಿದಾಗ ಕೊರೊನಾ ಇರೋದು ದೃಢಪಟ್ಟಿದೆ. ಇದೀಗ ಅವರನ್ನು ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಮನೆಯಲ್ಲಿರುವ ಅವರ ಅಜ್ಜ, ತಾಯಿ ಹಾಗೂ ಸಹೋದರನನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

- Advertisement -

Latest News

error: Content is protected !!