Monday, June 8, 2026
Homeಕರಾವಳಿರಮಾನಾಥ ರೈ ರಾಜಕೀಯ ನಿವೃತ್ತಿ ಪಡೆಯಲು ಪಕ್ಷ ಹಾಗೂ ಜನತೆ ಬಿಡಲ್ಲ; ಶಾಸಕ ಯು ಟಿ...

ರಮಾನಾಥ ರೈ ರಾಜಕೀಯ ನಿವೃತ್ತಿ ಪಡೆಯಲು ಪಕ್ಷ ಹಾಗೂ ಜನತೆ ಬಿಡಲ್ಲ; ಶಾಸಕ ಯು ಟಿ ಖಾದರ್ ಹೇಳಿಕೆ

- Advertisement -
- Advertisement -

ಮಂಗಳೂರು; ರಮಾನಾಥ ರೈ ರಾಜಕೀಯ ನಿವೃತ್ತಿ ಪಡೆಯಲು ಪಕ್ಷ ಹಾಗೂ ಜನತೆ ಬಿಡಲ್ಲ ಎಂದು ಶಾಸಕ ಯು ಟಿ ಖಾದರ್ ಹೇಳಿಕೆ ನೀಡಿದ್ದಾರೆ.

ರಮಾನಾಥ ರೈ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಾಸಕ, ಮಾಜಿ‌ ಸಚಿವ ಯು ಟಿ‌ ಖಾದರ್ ರಮಾನಾಥ ರೈ ಅವರನ್ನು ರಾಜಕೀಯದಿಂದ ನಿವೃತ್ತಿಯಾಗಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ರಮಾನಾಥ ರೈ ಅವರು ಅತ್ಯಂತ ಹಿರಿಯ ನಾಯಕರು. ಜಿಲ್ಲೆಯ ಅಭಿವೃದ್ಧಿ ಗೆ ಅಪಾರವಾದ ಕೊಡುಗೆಯನ್ನು ಕೊಟ್ಟವರು. ಅತ್ಯಂತ ಪ್ರಾಮಾಣಿಕ ರಾಜಕೀಯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ನಿವೃತ್ತಿ ಯಾಗಲು ಜನತೆ ಮತ್ತು ಪಕ್ಷ ಎಂದಿಗೂ ಬಿಡುವುದಿಲ್ಲ. ರಾಜಕೀಯದಲ್ಲಿ ಯಾವಾಗಲೂ ಇರುತ್ತಾರೆ, ಮುಂದೆಯು ಇರುತ್ತಾರೆ. ಚುನಾವಣಾ ರಾಜಕೀಯ ದಿಂದ ನಿವೃತ್ತಿಯಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ. ಇದೀಗ ರಮಾನಾಥ ರೈ ಆಪ್ತರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ತಮ್ಮ ನಿರ್ಧಾರ ಬದಲಿಸುತ್ತಾರಾ ಕಾದು ನೋಡಬೇಕಿದೆ.

- Advertisement -

Latest News

error: Content is protected !!