Thursday, June 4, 2026
Homeಕರಾವಳಿಉಡುಪಿಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಕೇರಳ ಸ್ಟೋರಿ ಚಲನಚಿತ್ರದ ಬ್ಯಾನರ್

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಕೇರಳ ಸ್ಟೋರಿ ಚಲನಚಿತ್ರದ ಬ್ಯಾನರ್

- Advertisement -
- Advertisement -

ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ದಿ‌ ಕೇರಳ ಸ್ಟೋರಿ ಚಲನಚಿತ್ರವನ್ನು ಪ್ರಚಾರ ಮಾಡುವಂತಹ ಬ್ಯಾನರ್ ಅಳವಡಿಸಲಾಗಿದೆ.

ಕೇರಳ ರಾಜ್ಯದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಆಂಗ್ಲ ಭಾಷೆಯಲ್ಲಿ ಅಳವಡಿಸಿರುವ ಬ್ಯಾನರ್ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಮಲಯಾಳಿ ಭಕ್ತರಿಗೆ ಸ್ವಾಗತ, ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ನೋಡಿ ಎಂದು ಬ್ಯಾನರ್ ಹಾಕಲಾಗಿದೆ. ‌ದೇವಾಲಯದ ದ್ವಾರ ಹಾಗೂ ಆವರಣ ಎರಡೂ ಕಡೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಬ್ಯಾನರ್ ಅಳವಡಿಸಿದ್ದಾರೆ.

ಲವ್ ಜಿಹಾದ್ ಜಾಗೃತಿ ಕುರಿತಂತೆ ನಿರ್ಮಿಸಲ್ಪಟ್ಟಿರುವ ಚಲನಚಿತ್ರ ದಿ ಕೇರಳ ಸ್ಟೋರಿ ಸದ್ಯ ರಾಷ್ಟ್ರಾದ್ಯಂತ ವಿವಾದ ಎಬ್ಬಿಸಿದೆ.

- Advertisement -

Latest News

error: Content is protected !!