Saturday, June 6, 2026
Homeಉದ್ಯಮವ್ಯಾಪಕವಾಗಿ ಹರಡುತ್ತಿರುವ ಕೊರೋನಾ; ಆಗಸ್ಟ್ ವರೆಗೆ ದೇಶಾದ್ಯಂತ ಎಲ್ಲಾ ರೈಲು ಸಂಚಾರವೂ ರದ್ದು

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ; ಆಗಸ್ಟ್ ವರೆಗೆ ದೇಶಾದ್ಯಂತ ಎಲ್ಲಾ ರೈಲು ಸಂಚಾರವೂ ರದ್ದು

- Advertisement -
- Advertisement -

ನವ ದೆಹಲಿ (ಜೂನ್‌ 25); ದೇಶದಾದ್ಯಂತ ಕೊರೋನಾ ವೈರಸ್‌ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೈಲು ಸಂಚಾರಗಳನ್ನೂ ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಇಂದು ಆದೇಶಿಸಿದೆ.

ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಸೇರಿಸಲು “ಶ್ರಮಿಕ್ ರೈಲು” ಮತ್ತು ಸಾಮಾನ್ಯ ಜನರ ಓಡಾಟಕ್ಕಾಗಿ 15 ಜೋಡಿ “ವಿಶೇಷ ರೈಲು”ಗಳನ್ನು ಭಾರತೀಯ ರೈಲ್ವೆ ಕಳೆದ ಒಂದು ತಿಂಗಳಿನಿಂದ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಆದರೆ, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಭೀತಿ ಹೆಚ್ಚುತ್ತಲೇ ಇದೆ. ಅಲ್ಲದೆ, ಸಾಂಕ್ರಾಮಿಕ ವೈರಸ್‌ ಸಾಮೂದಾಯಿಕವಾಗಿಯೂ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಭಾರತೀಯ ರೈಲ್ವೆ ಇಂದು ದೇಶದ ಎಲ್ಲಾ ರೈಲು ಸಂಚಾರವನ್ನೂ ಆಗಸ್ಟ್ 12ರವರೆಗೆ ರದ್ದು ಮಾಡಿ ಆದೇಶಿಸಿದೆ. ಅಲ್ಲದೆ, ಜುಲೈ 1 ರಿಂದ ಆಗಸ್ಟ್ 12 ರವರೆಗೆ ಸಾಮಾನ್ಯ ರೈಲುಗಳಿಗೆ ಟಿಕೆಟ್ ಕಾಯ್ದಿರಿಸಿದವರಿಗೆ ಹಣವನ್ನು ಪೂರ್ಣ ಮರುಪಾವತಿ ಮಾಡಲು ಮುಂದಾಗಿದೆ.

- Advertisement -

Latest News

error: Content is protected !!