Thursday, June 4, 2026
Homeತಾಜಾ ಸುದ್ದಿವೃಷಭಾವತಿ ನದಿ ತಡೆಗೋಡೆ ಕುಸಿದು ರಸ್ತೆ ಮೇಲೆ ಹರಿದ ಮಳೆ ನೀರು

ವೃಷಭಾವತಿ ನದಿ ತಡೆಗೋಡೆ ಕುಸಿದು ರಸ್ತೆ ಮೇಲೆ ಹರಿದ ಮಳೆ ನೀರು

- Advertisement -
- Advertisement -

ಬೆಂಗಳೂರು ಸಣ್ಣದೊಂದು ಮಳೆ ಬಂದ್ರೆ ಸಾಕು ಬೆಂಗಳೂರಿನ ರಸ್ತೆಗಳು ಹಳ್ಳಗಳಾಗಿ ಮಾರ್ಪಾಡುಗುತ್ತವೆ. ಅದರಲ್ಲೂ ಇವತ್ತು ಸುಮಾರು ಸಂಜೆ 4 ಗಂಟೆಯಿಂದ 7 ಗಂಟೆಯವರೆಗೂ ನಿರಂತರವಾಗಿ ಸುರಿದ ಮಳೆ ನಗರದಲ್ಲಿ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ.

ಮಳೆಯಿಂದಾಗಿ ಮೈಸೂರು ರಸ್ತೆಯಲ್ಲಿರುವ ವೃಷಭಾವತಿ ನದಿಯ ತಡೆಗೋಡೆ ಕುಸಿದಿದೆ. ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರಿನ ರಭಸ ಹೆಚ್ಚಾಗಿ ತಡೆಗೋಡೆ ಕುಸಿದಿದೆ. ಜೊತೆಗೆ ಮೈಸೂರು ರಸ್ತೆಯೂ ಕುಸಿದಿದೆ. ಇದರಿಂದಾಗಿ ಕೆಂಗೇರಿ ಹಾಗೂ ನಾಯಂಡಳ್ಳಿ ಬಳಿ ರಸ್ತೆಯಲ್ಲೇ ನದಿಯಲ್ಲಿ ಹರಿದಂತೆ ನೀರು ಹರಿದಿದೆ. ಇನ್ನು ರಸ್ತೆ ತುಂಬಾ ನೀರಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಮೈಸೂರು ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

- Advertisement -

Latest News

error: Content is protected !!