Friday, June 5, 2026
Homeತಾಜಾ ಸುದ್ದಿಬಿಹಾರದಲ್ಲಿ ಗುಡುಗು, ಸಿಡಿಲಿಗೆ ಇಂದು ಒಂದೇ ದಿನದಲ್ಲಿ 83 ಜನರು ಬಲಿ..!

ಬಿಹಾರದಲ್ಲಿ ಗುಡುಗು, ಸಿಡಿಲಿಗೆ ಇಂದು ಒಂದೇ ದಿನದಲ್ಲಿ 83 ಜನರು ಬಲಿ..!

- Advertisement -
- Advertisement -

ಪಾಟ್ನಾ: ಬಿಹಾರದಲ್ಲಿ ಸಿಡಿಲು ಹಾಗೂ ಭಾರೀ ಮಳೆಗೆ ಕಳೆದೆರಡು ದಿನಗಳಿಂದ 83 ಮಂದಿ ಮೃತಪಟ್ಟಿದ್ದಾರೆ. ಬಿಹಾರದ 13 ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಸಿಡಿಲಿಗೆ ಹಲವಾರು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಗೋಪಾಲ್ ಗಂಜ್ ಜಿಲ್ಲೆಯೊಂದರಲ್ಲೇ 13 ಮಂದಿ ಸಾವಿಗೀಡಾಗಿದ್ದಾರೆ.

ನಾವಡ, ಮಧುಬಾನಿ ಜಿಲ್ಲೆಗಳಲ್ಲಿ ತಲಾ 8, ಸಿವಾನ್ ಮತ್ತು ಬಾಗಲ್ ಪುರ್ ನಲ್ಲಿ ತಲಾ 6, ಈಸ್ಟ್ ಚಂಪರನ್, ದರ್ಬಾಂಗ ಮತ್ತು ಔರಂಗಾಬಾದ್ ನಲ್ಲಿ ತಲಾ 3, ಪಶ್ಚಿಮ ಚಂಪರನ್, ಕಿಶನ್ ಗಂಜ್, ಜೆಹನಾಬಾದ್, ಜಮುಯಿ, ಪುರೆನಾ, ಸುಪೌಲ್, ಕೈಮರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಮೃತಪಟ್ಟವರೆಲ್ಲರೂ ರೈತರು ಮತ್ತು ಭತ್ತವನ್ನು ನೆಡಲು ಹೊರಟವರು ಎಂದು ಹೇಳಲಾಗುತ್ತಿದೆ.

ವಿವಿಧ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಡಿಲುಯ ಬಡಿದು ಹಲವಾರು ಮನೆಗಳಿಗೆ ಹಾನಿಯಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

- Advertisement -

Latest News

error: Content is protected !!