Saturday, June 6, 2026
Homeಕರಾವಳಿಬಂಟ್ವಾಳ: ಸ್ಕೂಟರ್- ಕಾರು ಅಪಘಾತ, ಯುವತಿ ಸಾವು, ಮತ್ತೊಬ್ಬಾಕೆ ಗಂಭೀರ

ಬಂಟ್ವಾಳ: ಸ್ಕೂಟರ್- ಕಾರು ಅಪಘಾತ, ಯುವತಿ ಸಾವು, ಮತ್ತೊಬ್ಬಾಕೆ ಗಂಭೀರ

- Advertisement -
- Advertisement -

ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ನ ಹಿಂದಿನ ಸೀಟ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೃತಪಟ್ಟಿರುವ ದಾರುಣ ಘಟನೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಇಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಯುವತಿಗೂ ಗಂಭೀರ ಗಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ಯುವತಿಯನ್ನು ಕಡೆಗೋಳಿ ನಿವಾಸಿ ಶ್ಯಾಮಲಾ (27) ಎಂದು ಗುರುತಿಸಲಾಗಿದೆ ಹಾಗೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಈಕೆಯ ಸ್ನೇಹಿತೆ ಹರ್ಷಿತಾ ಎಂದು ಗುರುತಿಸಲಾಗಿದೆ.

ಮೃತಪಟ್ಟ ಶ್ಯಾಮಲಾ ಬಂಟ್ವಾಳದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು.

ಇವರಿಬ್ಬರೂ ಬಿ.ಸಿ.ರೋಡ್ ನಿಂದ ಬೆಂಜನಪದವು ರಸ್ತೆಯ ಮೂಲಕ ಕಡೆಗೋಳಿ ಮನೆಗೆ ಹೋಗುತ್ತಿದ್ದ ವೇಳೆ ಬೆಂಜನಪದವು ಎಂಬಲ್ಲಿ ಎದುರಿನಿಂದ ಬಂದ ಕಾರು ಇವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಕಾರು ಚಾಲಕನ ವೇಗದ ಚಲಾವಣೆಯೇ ಅಪಘಾತಕ್ಕೆ ಕಾರಣವಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

- Advertisement -

Latest News

error: Content is protected !!