- Advertisement -
![]()
- Advertisement -
ಮಂಗಳೂರು : ಅಪಾರ್ಟ್ ಮೆಂಟ್ ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಂತೂರಿನಲ್ಲಿ ನಡೆದಿದೆ, ಅಪಾರ್ಟ್ಮೆಂಟ್ ನ 9ನೇ ಮಹಡಿಯಿಂದ ಬಿದ್ದು ನಿನ್ನೆ ಸಂಜೆ 6 ಗಂಟೆ ವೇಳೆಗೆ ವಿನಯ್ ಜೋಯೆಲ್ ತಾವ್ರೋ ( 22) ಎಂಬವರು ಸಾವನ್ನಪ್ಪಿದ್ದಾರೆ.
ಎಸಿ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವಿನಯ್ ಜೋಯೆಲ್ ತಾವ್ರೋ ಒಂಬತ್ತನೇ ಮಹಡಿಯ ಕಿಟಕಿಯಿಂದ ಹೊರಬಂದು ಸ್ಕ್ರೂ ಹಾಕುವಾಗ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,
- Advertisement -


