Sunday, June 7, 2026
Homeತಾಜಾ ಸುದ್ದಿಶಾಲೆಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ವರದಿ ಕೇಳಿದ ಸರ್ಕಾರ:ಡಾ. ಗುರುರಾಜ ಕರ್ಜಗಿ...

ಶಾಲೆಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ವರದಿ ಕೇಳಿದ ಸರ್ಕಾರ:ಡಾ. ಗುರುರಾಜ ಕರ್ಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶ

- Advertisement -
- Advertisement -

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ವಿಚಾರವಾಗಿ ರಾಜ್ಯ ಸರ್ಕಾರದಿಂದ ಸಮಿತಿ ರಚಿಸಲ್ಪಟ್ಟಿದೆ.

ವಿದ್ಯಾರ್ಥಿಗಳಿಗೆ ಹತ್ತು‌ ನಿಮಿಷಗಳ ಕಾಲ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತಾಗಿ ವರದಿ ಪಡೆಯಲು ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹಿರಿಯ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಧ್ಯಕ್ಷತೆಯ ಸಮಿತಿ ಆರು ಜನ ಶಿಕ್ಷಣ ತಜ್ಞರನ್ನೊಳಗೊಂಡಿದೆ. ಒಂದು ತಿಂಗಳ ಒಳಗಾಗಿ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಸಂಬಂಧ ಸಾಧಕ ಬಾಧಕಗಳ ಕುರಿತು ವರದಿ ನೀಡಲು ಸಮಿತಿಗೆ ಕಾಲಾವಕಾಶ ನೀಡಲಾಗಿದೆ.

- Advertisement -

Latest News

error: Content is protected !!