Thursday, June 4, 2026
Homeಕರಾವಳಿಕಡಬ; ರಬ್ಬರ್ ಮರ ಟ್ಯಾಪಿಂಗ್‌ ಮಾಡುವ ಕತ್ತಿ ಎದೆಗೆ ಚುಚ್ಚಿ ಮಹಿಳೆ ಸಾವು

ಕಡಬ; ರಬ್ಬರ್ ಮರ ಟ್ಯಾಪಿಂಗ್‌ ಮಾಡುವ ಕತ್ತಿ ಎದೆಗೆ ಚುಚ್ಚಿ ಮಹಿಳೆ ಸಾವು

- Advertisement -
- Advertisement -

ಕಡಬ: ರಬ್ಬರ್ ಮರ ಟ್ಯಾಪಿಂಗ್‌ ಮಾಡುವ ಕತ್ತಿ ಎದೆಗೆ ಚುಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ.

ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ ಮೃತ ದುರ್ದೈವಿ.

ಗೀತಾರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಎಡವಿ ಬಿದ್ದಿದ್ದಾರೆ. , ಈ ವೇಳೆ ಅವರ ಕೈಯಲ್ಲಿದ್ದ ಕತ್ತಿ ಎದೆಯೊಳಗೆ ಹೊಕ್ಕು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಅವರ ಪತಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!