Saturday, August 29, 2026
Homeಕರಾವಳಿಉಡುಪಿಅಂಗಡಿ ಮಾಲೀಕನ ದ್ವಿಚಕ್ರ ವಾಹನದಲ್ಲಿದ್ದ 6 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ಆರೋಪಿಯ ಬಂಧನ

ಅಂಗಡಿ ಮಾಲೀಕನ ದ್ವಿಚಕ್ರ ವಾಹನದಲ್ಲಿದ್ದ 6 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ಆರೋಪಿಯ ಬಂಧನ

- Advertisement -
- Advertisement -

ಉಡುಪಿ: ಹಾಲು ಖರೀದಿ ಮಾಡುವ ನೆಪದಲ್ಲಿ ಅಂಗಡಿ ಬಂದು ಅಂಗಡಿ ಮಾಲೀಕನ ಬೈಕ್ ನಲ್ಲಿದ್ದ 6 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ತಂಡದ ಓರ್ವ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಸುನಿಲ್ (29) ಬಂಧಿತ ಆರೋಪಿ.

ಡಿ.22ರಂದು ರಾತ್ರಿ ಕಾಪು ಮಹಾಲಸ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚುತ್ತಿರುವಾಗ ಮೂರು ಜನ ಬಂದು ಹಾಲು ಕೊಡುವಂತೆ ಕೇಳಿದ್ದು, ಆ ವೇಳೆ ಮಾಲಕ ಅಂಗಡಿಯ ಒಳ ಹೋದಾಗ ದುಷ್ಕರ್ಮಿಗಳು ಮಾಲೀಕನ ಸ್ಕೂಟರ್‌ನಲ್ಲಿಟ್ಟಿದ್ದ 6 ಲಕ್ಷ ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!