Friday, August 28, 2026
Homeತಾಜಾ ಸುದ್ದಿಪಂಜುರ್ಲಿ ವೇಷ ಧರಿಸಿ ವರಾಹಂ ರೂಪಂ ಹಾಡಿಗೆ ನೃತ್ಯ ಮಾಡುವಾಗ ವಿದ್ಯಾರ್ಥಿಯ ಮೇಲೆ ದೈವದ ಆವಾಹನೆ

ಪಂಜುರ್ಲಿ ವೇಷ ಧರಿಸಿ ವರಾಹಂ ರೂಪಂ ಹಾಡಿಗೆ ನೃತ್ಯ ಮಾಡುವಾಗ ವಿದ್ಯಾರ್ಥಿಯ ಮೇಲೆ ದೈವದ ಆವಾಹನೆ

- Advertisement -
- Advertisement -

ಬೆಂಗಳೂರು; ಪಂಜುರ್ಲಿ ವೇಷ ಧರಿಸಿ ವರಾಹಂ ರೂಪಂ ಹಾಡಿಗೆ ನೃತ್ಯ ಮಾಡುವಾಗ ವಿದ್ಯಾರ್ಥಿಯ ಮೇಲೆ ದೈವದ ಆವಾಹನೆ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿಯ ವಿಶಾಲ್ ಪಂಜುರ್ಲಿ ದೈವದ ವೇಷ ಧರಿಸಿ ವರಾಹ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದ. ಆಗ ದೈವ ಆವಾಹನೆಯಾಗುತ್ತಿದ್ದಂತೆ ವೇದಿಕೆ ಮೇಲಿಂದ ಕೆಳಗೆ ಬಂದು ನರ್ತಿಸಿದ್ದಾನೆ. ಕೂಡಲೇ ಎಚ್ಚೆತ್ತ ನಾಲ್ಕೈದು ಮಂದಿ ಬಂದರೂ ವಿಶಾಲ್​ನನ್ನು ಸಮಾಧಾನಪಡಿಸಲು ಯತ್ನಿಸಿ ವಿಫಲರಾಗಿದ್ದಾರೆ.

ಇನ್ನು ವಿಶಾಲ್ ಮೇಲೆ ದೈವ ಆವಾಹನೆಯಾಗಿ ಉದ್ವೇಗಕ್ಕೆ ಒಳಗಾಗುತ್ತಿದ್ದಂತೆ ಆಯೋಜಕರು ಹಾಡನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ. ವಿದ್ಯಾರ್ಥಿಯ ಆರ್ಭಟ ಕಂಡು ಕಾಲೇಜು ವಾರ್ಷಿಕೋತ್ಸವಕ್ಕೆ ಬಂದಿದ್ದ ನೋಡುಗರು ಭಯಗೊಂಡಿದ್ದಾರೆ.

- Advertisement -

Latest News

error: Content is protected !!