Wednesday, May 1, 2024
Homeಕರಾವಳಿಎರಡೇ ತಾಸಿನಲ್ಲಿ 1700 ಅಡಿ ಗಡಾಯಿಕಲ್ಲು ಏರಿದ ಕೋತಿ ರಾಜ್: ಕನ್ನಡ ಬಾವುಟ ಹಾರಿಸಿ ಕನ್ನಡಾಂಬೆಗೆ...

ಎರಡೇ ತಾಸಿನಲ್ಲಿ 1700 ಅಡಿ ಗಡಾಯಿಕಲ್ಲು ಏರಿದ ಕೋತಿ ರಾಜ್: ಕನ್ನಡ ಬಾವುಟ ಹಾರಿಸಿ ಕನ್ನಡಾಂಬೆಗೆ ನಮನ

spot_img
- Advertisement -
- Advertisement -

ಬೆಳ್ತಂಗಡಿ: ಜ್ಯೋತಿರಾಜ್ ಯಾನೆ ಕೋತಿ ರಾಜ್ ಎಂದೇ ಖ್ಯಾತಿಯಾಗಿರುವ ಮಂಕಿ ಮ್ಯಾನ್ ಭಾನುವಾರ ಎರಡೇ ತಾಸಿನಲ್ಲಿ ಅನಾಯಾಸವಾಗಿ ಮೆಟ್ಟಿಲುಗಳ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಬಂಡೆ ಏರಿ ದಾಖಲೆ ನಿರ್ಮಿಸಿದ್ದಾರೆ.

ಕೈ ಮೂಲಕ ಸಮುದ್ರ ಮಟ್ಟದಿಂದ 1700 ಅಡಿಯಿರುವ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಏರುವ ಮೂಲಕ ದಿ ಮಂಕಿ ಮ್ಯಾನ್ ಮತ್ತೊಂದು ದಾಖಲೆಯನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ ಇಲ್ಲಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನದ ಉತ್ತರ ಭಾಗದಿಂದ ಗಡಾಯಿಕಲ್ಲು ಏರುವ ಮುನ್ನ 9.50 ಕ್ಕೆ ತೆಂಗಿನ ಕಾಯಿ ಒಡೆದು ಹತ್ತಲು ಆರಂಭಿಸಿದ್ದಾರೆ. ಸುಮಾರು 11.50 ರ ಸುಮಾರಿಗೆ ಗಡಾಯಿಕಲ್ಲು ತುತ್ತ ತುದಿ ಏರಿ ಕನ್ನಡ ನಾಡಿನ ಬಾವುಟವನ್ನು ಹಾರಿಸುವ ಮೂಲಕ ಕನ್ನಡಭಿಮಾನ ಮೆರೆದಿದ್ದಾರೆ.

ಇವರ ತಂಡದೊಂದಿಗೆ ಕುದುರೇಮುಖ ವನ್ಯಜೀವಿ ವಿಭಾಗದ ಆರ್.ಎಫ್.ಒ.ಸ್ವಾತಿ, ಅರಣ್ಯರಕ್ಷಕ ಕಿರಣ್ ಪಾಟೀಲ್ ಜತೆಗಿದ್ದರು.

- Advertisement -
spot_img

Latest News

error: Content is protected !!