Saturday, June 6, 2026
Homeಕರಾವಳಿಉಡುಪಿಕಾರ್ಕಳ; ದನದ ಕೊಂಬು ತಾಗಿ ಗಾಯಗೊಂಡಿದ್ದ ಮಹಿಳೆ ದುರ್ಮರಣ

ಕಾರ್ಕಳ; ದನದ ಕೊಂಬು ತಾಗಿ ಗಾಯಗೊಂಡಿದ್ದ ಮಹಿಳೆ ದುರ್ಮರಣ

- Advertisement -
- Advertisement -

ಕಾರ್ಕಳ: ದನದ ಕೊಟ್ಟಿಗೆ ಹುಲ್ಲು ಹಾಕುತ್ತಿದ್ದಾಗ ದನ ಹಾಯ್ದು ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ವೇಣೂರಿನ ಗುಂಡೂರಿ ಗ್ರಾಮದ ದರಿಕಂಡ ನಿವಾಸಿ ಸದಾನಂದ ಪೂಜಾರಿ ಅವರ ಪತ್ನಿ ಮೋಹಿನಿ ಯಾನೆ ಪ್ರೇಮ (45) ಮೃತ ದುರ್ದೈವಿ.

ಮೋಹಿನಿ ಅವರು ದನದ ಕೊಟ್ಟಿಗೆ ದನಕ್ಕೆ ಹುಲ್ಲು ಹಾಕುತ್ತಿದ್ದಾಗ ದನ ಹಾಯ್ದು ಕೊಂಬು ಕುತ್ತಿಗೆ ತಾಗಿ ಗಂಭೀರ ಗಾಯವಾಗಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!