Saturday, June 6, 2026
Homeಕರಾವಳಿಸುಬ್ರಮಣ್ಯ; ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿಯ ಕಾಲು ಮುರಿತ

ಸುಬ್ರಮಣ್ಯ; ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿಯ ಕಾಲು ಮುರಿತ

- Advertisement -
- Advertisement -

ಸುಬ್ರಮಣ್ಯ; ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿಯ ಕಾಲು ಮುರಿದಿರುವ ಘಟನೆ ಸೋಮವಾರ ಮಧ್ಯಾಹ್ನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ನಡೆದಿದೆ.


ನೆಟ್ಟಣದ ನವಜೀವನ ಕಾಲನಿ ನಿವಾಸಿ ದೇವಸಹಾಯ ಕಾಲು ಮುರಿದುಕೊಂಡವರು.  ನಿನ್ನೆ ಮಧ್ಯಾಹ್ನ ಮಂಗಳೂರಿಗೆ ತೆರಳುವ ರೈಲು ಹೊರಡಲು ಆರಂಭವಾದ ವೇಳೆ ದೇವಸಹಾಯ ರೈಲಿಗೆ ಹತ್ತಲು ಯತ್ನಿಸಿದ್ದು ಆಗ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಕಾಲಿಗೆ ಗಂಭೀರ ಗಾಯವಾಗಿರುವ  ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಇನ್ನು ನೆಟ್ಟಣದ ರೈಲು ನಿಲ್ದಾಣದಲ್ಲಿ ಆಗಸ್ಟ್ ನಲ್ಲಿ ವ್ಯಕ್ತಿಯೋರ್ವರಿಗೆ ರೈಲು ಡಿಕ್ಕಿಯಾಗಿ ಕಾಲು ಮುರಿತಕ್ಕೊಳಗಾಗಿತ್ತು. ಕೆಲ ತಿಂಗಳ ಅಂತರದಲ್ಲಿ ಇದು ಎರಡನೇ ಘಟನೆಯಾಗಿದೆ.

- Advertisement -

Latest News

error: Content is protected !!