Saturday, October 17, 2026
Homeಕರಾವಳಿಉಡುಪಿಉಡುಪಿ; ದೈವ ದರ್ಶನ ವೀಕ್ಷಿಸುತ್ತಲೇ ಕುಸಿದು ಬಿದ್ದು ರಂಗಭೂಮಿ ಕಲಾವಿದ ನಿಧನ

ಉಡುಪಿ; ದೈವ ದರ್ಶನ ವೀಕ್ಷಿಸುತ್ತಲೇ ಕುಸಿದು ಬಿದ್ದು ರಂಗಭೂಮಿ ಕಲಾವಿದ ನಿಧನ

- Advertisement -
- Advertisement -

ಉಡುಪಿ; ದೈವ ದರ್ಶನ ವೀಕ್ಷಿಸುತ್ತಿದ್ದಾಗ ಕುಸಿದು ಬಿದ್ದು ರಂಗಭೂಮಿ ಕಲಾವಿದ ಸಾವನ್ನಪ್ಪಿದ ಘಟನೆ ಉಡುಪಿಯ ಬ್ರಹ್ಮಾವರದ ಕುಮ್ರಗೋಡು ಗ್ರಾಮದ ಜಂಬಾಡಿ ಎಂಬಲ್ಲಿ ನಡೆದಿದೆ. ಬ್ರಹ್ಮಾವರದ ಕಾರ್ತಿಕ್ ಕುಮಾರ್(31)  ಮೃತ ಕಲಾವಿದ.

ಕಾರ್ತಿಕ್  ಸುಮಾರು 1 ತಿಂಗಳಿನಿಂದ ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದರು ಎನ್ನಲಾಗಿದೆ.  ಅಕ್ಕನ ಮನೆಯ ದೈವದ ಮನೆಯಲ್ಲಿ ದರ್ಶನ ಆಗುತ್ತಿರುವಾಗ ಕುರ್ಚಿಯಲ್ಲಿ ಕುಳಿತಿದ್ದ ಕಾರ್ತಿಕ್ ಕುಸಿದು ಬಿದ್ದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಸಂಜೆ ವೇಳೆ ಅವರು ಮೃತಪಟ್ಟಿದ್ದಾರೆ. 

ರಂಗಭೂಮಿ ಕಲಾವಿದರಾಗಿದ್ದ ಕಾರ್ತಿಕ್, ಮಂದಾರ ಬೈಕಾಡಿ, ಭೂಮಿಕಾ ರಂಗ ತಂಡ ಹಾರಾಡಿ, ದುರ್ಗಾ ಕಲಾ ತಂಡ ಸೇರಿದಂತೆ ವಿವಿಧ ತಂಡಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಹಾಸ್ಯ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು. ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!