Saturday, June 6, 2026
Homeಕರಾವಳಿಮಂಗಳೂರು: ಶಾಲೆಗೆ ಹೊರಡಲು ರೆಡಿಯಾಗುತ್ತಿದ್ದ ಬಾಲಕ ಕುಸಿದು ಬಿದ್ದು ಸಾವು

ಮಂಗಳೂರು: ಶಾಲೆಗೆ ಹೊರಡಲು ರೆಡಿಯಾಗುತ್ತಿದ್ದ ಬಾಲಕ ಕುಸಿದು ಬಿದ್ದು ಸಾವು

- Advertisement -
- Advertisement -

ಮಂಗಳೂರು: ಶಾಲೆಗೆ ಹೊರಡಲು ರೆಡಿಯಾಗುತ್ತಿದ್ದ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಸುರತ್ಕಲ್ ನಲ್ಲಿ ನಡೆದಿದೆ. ಬಾಲಕ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಇಲ್ಲಿನ ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಮೃತ ಬಾಲಕ. ಬೆಳಗ್ಗೆ ಸಿದ್ದನಾಗಿದ್ದ ಹಸೀಮ್‌ಗೆ ಏಕಾಏಕಿ ತಲೆ ಸುತ್ತು ಬಂದು ಬಿದ್ದಿದ್ದು, ಮನೆಮಂದಿ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಅಬ್ದುಲ್‌ ರೆಹಮಾನ್‌ ದಂಪತಿ ಮೂವರು ಪುತ್ರರಲ್ಲಿ ಮೃತ ಹಸೀಮ್‌ ಎರಡನೆಯವನಾಗಿದ್ದಾನೆ.


ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಮುಂದಾದಾಗ ಪೋಷಕರು ಮೃತದೇಹವನ್ನು ಕೊಂಡೊಯ್ಯುವ ಬಗ್ಗೆ ವೈದ್ಯರಲ್ಲಿ ತಿಳಿಸಿದ್ದರು. ಆದರೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸದೆ ಬಿಟ್ಟುಕೊಡಲು ಒಪ್ಪಲಿಲ್ಲ. ಈ ಬಗ್ಗೆ ಗೊಂದಲ ಉಂಟಾದ ಕಾರಣ ಮಾಜಿ ಶಾಸಕ ಮೊದಿನ್‌ ಬಾವಾ ಅವರು ಸ್ಥಳಕ್ಕೆ ಆಗಮಿಸಿ ಬಾಲಕನ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರು.

- Advertisement -

Latest News

error: Content is protected !!