Sunday, June 7, 2026
HomeUncategorizedನಾಪತ್ತೆಯಾಗಿದ್ದ ವಿಟ್ಲದ ಯುವತಿ ಬೆಳ್ತಂಗಡಿಯ ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಪತ್ತೆ

ನಾಪತ್ತೆಯಾಗಿದ್ದ ವಿಟ್ಲದ ಯುವತಿ ಬೆಳ್ತಂಗಡಿಯ ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಪತ್ತೆ

- Advertisement -
- Advertisement -

ವಿಟ್ಲ: ಸ್ನೇಹಿತೆ ಜತೆ ತೆರಳಿ ನಾಪತ್ತೆಯಾಗಿದ್ದ ಯುವತಿಯು ತನ್ನ ಪ್ರಿಯಕರನ ಜತೆ ಬೆಂಗಳೂರಿನಲ್ಲಿರುವುದನ್ನು ವಿಟ್ಲ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ ಜ್ಯೋತಿ (23)ಯನ್ನು ಮೇ 29ರಂದು ಆಕೆಯ ಸ್ನೇಹಿತೆ ಶ್ರೇಯಾ ಕರೆದುಕೊಂಡು ಹೋಗಿದ್ದಳು. ಬಳಿಕ ಜ್ಯೋತಿ ನಾಪತ್ತೆಯಾಗಿದ್ದಳು.

ಈ ಬಗ್ಗೆ ಆಕೆಯ ತಂದೆ ಭಾಸ್ಕರ ಅವರು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಜ್ಯೋತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಿರಣ್‌ ಜತೆ ಇರುವ ಬಗ್ಗೆ ಮಾಹಿತಿ ಪಡೆದರು.

ಅಲ್ಲಿಗೆ ತೆರಳಿದ ವಿಟ್ಲ ಠಾಣಾಧಿಕಾರಿ ವಿನೋದ್‌ ಕುಮಾರ್‌ ಎಸ್‌.ಕೆ. ನೇತೃತ್ವದ ಪೊಲೀಸರ ತಂಡ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಪತ್ತೆ ಹಚ್ಚಿದೆ.

- Advertisement -

Latest News

error: Content is protected !!