Thursday, June 4, 2026
Homeತಾಜಾ ಸುದ್ದಿ12 ಹೆಂಡತಿಯರು,102 ಮಕ್ಕಳು 568 ಮೊಮ್ಮಕ್ಕಳು : ಇನ್ನು ಮಕ್ಕಳು ಬೇಡ ಎಂದ ಪ್ರತಿಜ್ಞೆ ಮಾಡಿದ...

12 ಹೆಂಡತಿಯರು,102 ಮಕ್ಕಳು 568 ಮೊಮ್ಮಕ್ಕಳು : ಇನ್ನು ಮಕ್ಕಳು ಬೇಡ ಎಂದ ಪ್ರತಿಜ್ಞೆ ಮಾಡಿದ ಭೂಪ: ಅಷ್ಟಕ್ಕೂ ಕಾರಣವೇನು ಗೊತ್ತಾ?

- Advertisement -
- Advertisement -

ನ್ಯೂಸ್ ಡೆಸ್ಕ್ : ಮದುವೆ ವಯಸ್ಸಾದ್ರೂ ಹುಡುಗಿ ಸಿಕ್ತಿಲ್ಲ, ಒಂದೇ ಮಗು ಸಾಕಪ್ಪಾ ತುಂಬಾ ಮಕ್ಳಿದ್ರೆ ಸಾಕೋದು ಕಷ್ಟ ಅಂತಾ ಹೇಳೋರನ್ನು ನೋಡ್ತಾನೇ ಇರ್ತೀವಿ. ಆದ್ರೆ ಇಲ್ಲೊಪ್ಪ ಭೂಪ 12 ಹೆಂಡತಿಯರು ಹಾಗೂ 102 ಮಕ್ಕಳನ್ನು ಹೊಂದಿದ್ದು, ಇದೀಗ ಇನ್ನು ಮುಂದೆ ಮಕ್ಕಳನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ.

ಅಂದ್ಹಾಗೆ ಉಗಾಂಡಾದ ಲುಸಾಕಾದ ಮೂಸಾ ಹಸಾಹ್ಯ ಈ ರೀತಿ ಪ್ರತಿಜ್ಞೆ ಮಾಡಿದ ವ್ಯಕ್ತಿ. ಉಗಾಂಡದಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಮೂಸಾ 16ನೇ ವಯಸ್ಸಿನಲ್ಲಿದ್ದಾಗ ತನ್ನ ಮೊದಲ ಪತ್ನಿ ಹನೀಫಾ ಅವರನ್ನು 1971ರಲ್ಲಿ ಮದುವೆಯಾಗಿದ್ದ. ಆ ಸಂದರ್ಭದಲ್ಲಿ ಶಾಲೆಯನ್ನು ತೊರೆದಿದ್ದ. 2 ವರ್ಷಗಳ ನಂತರ ಹನೀಫಾ ಮೊದಲ ಮಗುವಿಗೆ ಜನ್ಮ ನೀಡಿದ್ದಾಗ ಮೂಸಾ ಅನೇಕ ಮಹಿಳೆಯರನ್ನು ಮದುವೆ ಆಗಿದ್ದ.

ಹೀಗೆ ಮದುವೆ ಆಗುತ್ತಾ ಆಗುತ್ತಾ ಈತ ಬರೊಬ್ಬರಿ 12 ಮದುವೆಯನ್ನು ಆಗಿದ್ದು, 102 ಮಕ್ಕಳನ್ನು ಹೊಂದಿದ್ದಾನೆ. ವಿಚಿತ್ರವೆಂದರೆ ಮೂಸಾಗೆ ತನ್ನ ಕೆಲವು ಮಕ್ಕಳ ಹಾಗೂ ಮೊಮ್ಮಕ್ಕಳ ಹೆಸರುಗಳೇ ತಿಳಿದಿಲ್ಲ. ಆದರೆ ಈ ಎಲ್ಲ ಪತ್ನಿಯರಿಗೆ ಹಾಗೂ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲು ಈತ ಹೆಣಗಾಡುತ್ತಿದ್ದಾನೆ.

ಅಷ್ಟೇ ಅಲ್ಲದೇ ಇವರೆಲ್ಲರೂ ಒಂದೇ ಮನೆಯಲ್ಲೇ ವಾಸಿಸುತ್ತಿದ್ದು, 12 ಕೊಣೆ ಮನೆಯಲ್ಲೇ 12 ಹೆಂಡತಿಯರು 102 ಮಕ್ಕಳು, 568 ಮೊಮ್ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಆದರೆ ಇಡೀ ಮನೆಯನ್ನು ನಿರ್ವಹಿಸಲು ಆರ್ಥಿಕ ಸಮಸ್ಯೆಯನ್ನು ಹೊಂದಿದ್ದು, ಈ ಸಮಸ್ಯೆಯನ್ನು ನಿರ್ವಹಿಸಲು ಒಂದು ಪರಿಹಾರವನ್ನು ಹುಡುಕಿದ್ದಾನೆ.

ಈತ ಇನ್ನು ಮುಂದೆ ಮಕ್ಕಳನ್ನು ಮಾಡಬಾರದು ಎಂದು ನಿರ್ಧರಿಸಿ, ಮಕ್ಕಳನ್ನು ಹೆರುವ ವಯಸ್ಸಿನ ತನ್ನ ಎಲ್ಲಾ ಪತ್ನಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಆದೇಶಿಸಿದ್ದಾನೆ. ಅಷ್ಟೇ ಅಲ್ಲದೇ ಇತ್ತೀಚೆಗೆ ತನ್ನ ಆರ್ಥಿಕ ಸಮಸ್ಯೆಯಿಂದಾಗಿ ಆತ ಇಬ್ಬರು ಪತ್ನಿಯನ್ನು ತೊರೆದಿದ್ದಾನೆ.

- Advertisement -

Latest News

error: Content is protected !!