Sunday, June 14, 2026
Homeಕರಾವಳಿಉಪ್ಪಿನಂಗಡಿ: ಗುಜರಿ ಆಯುವ ನೆಪದಲ್ಲಿ ಮನೆಯಂಗಳಕ್ಕೆ ಬಂದು ಕಳ್ಳತನ ಆರೋಪ: ಇಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಉಪ್ಪಿನಂಗಡಿ: ಗುಜರಿ ಆಯುವ ನೆಪದಲ್ಲಿ ಮನೆಯಂಗಳಕ್ಕೆ ಬಂದು ಕಳ್ಳತನ ಆರೋಪ: ಇಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

- Advertisement -
- Advertisement -

ಉಪ್ಪಿನಂಗಡಿ: ಗುಜರಿ ಆಯುವ ನೆಪದಲ್ಲಿ ಮನೆಯಂಗಳಕ್ಕೆ ಭೇಟಿ ನೀಡಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದ ಘಟನೆಗೆ ಸಂಬಂಧಿಸಿ ಸ್ಥಳೀಯರು ಇಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಮಂಗಳವಾರ ನಸುಕಿನ ಜಾವ ಸಂಗಮ್ ಸೌಂಡ್ಸ್ ಮಾಲೀಕರ ಮನೆಯಂಗಳಕ್ಕೆ ಬಂದ ಇಬ್ಬರು ಅಲ್ಲಿದ್ದ ಮೆಟಲ್ ಚೋಕ್ ಹಾಗೂ ನಾಯಿಯ ಸರಪಳಿಯನ್ನು ಕದ್ದೊಯ್ದಿದ್ದಾರೆ.ಇದು ಗಮನಕ್ಕೆ ಬಂದಾಕ್ಷಣ ಸ್ಥಳೀಯ ಸಿಸಿ ಕ್ಯಾಮಾರಾವನ್ನು ವೀಕ್ಷಿಸಿ ಅವರ ಗುರುತು ಪತ್ತೆ ಹಚ್ಚಿ, ಪೇಟೆಯಲ್ಲಿಯೇ ಇದ್ದ ಇಬ್ಬರನ್ನೂ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಆರೋಪಿಗಳಲ್ಲಿ ಓರ್ವ ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಶಿವ ಯಾನೆ ಧರ್ಮ ನಾಯಕ್ (39) ಹಾಗೂ ಇನ್ನೋರ್ವ ಗದಗ್ ಜಿಲ್ಲಾ ಮುಂಡರಿಲ್ಲಾ ನಿವಾಸಿ ಪ್ರದೀಪ್ ಯಾನೆ ಚಟ್ರಪ್ಪ (27) ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Latest News

error: Content is protected !!