Monday, June 15, 2026
Homeತಾಜಾ ಸುದ್ದಿಯಡಿಯೂರಪ್ಪರಂತೆ ಹಿರಿಯ ನಾಯಕರು ಸ್ವಯಂ ನಿವೃತ್ತಿ ಘೋಷಿಸಿಕೊಳ್ಳಲಿ: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಸಂದೇಶ

ಯಡಿಯೂರಪ್ಪರಂತೆ ಹಿರಿಯ ನಾಯಕರು ಸ್ವಯಂ ನಿವೃತ್ತಿ ಘೋಷಿಸಿಕೊಳ್ಳಲಿ: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಸಂದೇಶ

- Advertisement -
- Advertisement -

ಗುಜರಾತ್ ಮಾದರಿಯಂತೆ ಕರ್ನಾಟಕದಲ್ಲೂ 2023ರ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಹೈಕಮಾಂಡ್‌ ಸ್ಪಷ್ಟವಾಗಿ ಸಂದೇಶ ನೀಡಿದೆ.

ಡಿ. 5ರಂದು ಗುಜರಾತ್‌ ಚುನಾವಣೆ ಮುಗಿದಿದ್ದು ಅಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು. ಈ ವೇಳೆ ಹೈಕಮಾಂಡ್ ರಾಜ್ಯ ನಾಯಕರಿಗೆ ಮುಖ್ಯವಾದ ಸಂದೇಶಗಳನ್ನು ಕಳುಹಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ಹಿರಿಯ ನಾಯಕರು ಅವರೇ ಸ್ವಯಂ ನಿವೃತ್ತಿ ಘೋಷಿಸಿಕೊಳ್ಳಬೇಕು. ಹಿರಿಯ ಸಚಿವರಿಗೆ ಮನವರಿಕೆ ಮಾಡಿಕೊಡುವಂತೆ ಕೆಲ ನಾಯಕರಿಗೆ ನಿರ್ದೇಶನ ನೀಡಬೇಕು ಎಂದು ಹೈಕಮಾಂಡ್‌ ತಿಳಿಸಿದೆ.

- Advertisement -

Latest News

error: Content is protected !!