Saturday, June 6, 2026
Homeಕರಾವಳಿಬೆಳ್ತಂಗಡಿ : ಟ್ರಕ್ ಹಾಗೂ ಗೂಡ್ಸ್  ನಡುವೆ ಅಪಘಾತ

ಬೆಳ್ತಂಗಡಿ : ಟ್ರಕ್ ಹಾಗೂ ಗೂಡ್ಸ್  ನಡುವೆ ಅಪಘಾತ

- Advertisement -
- Advertisement -

ಬೆಳ್ತಂಗಡಿ : ಟ್ರಕ್ ಹಾಗೂ ಗೂಡ್ಸ್  ನಡುವೆ ಅಪಘಾತ ಸಂಭವಿಸಿ ಗೂಡ್ಸ್ ವಾಹನದಲ್ಲಿದ್ದ ಚಾಲಕನ ಸಂಬಂಧಿಕರಿಬ್ಬರು ಗಾಯಗೊಂಡ ಘಟನೆ  ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪ್ರಸನ್ನ ಕಾಲೇಜಿನ ಬಳಿ ನಡೆದಿದೆ.

ಹಾಸನದಿಂದ ಕಾರ್ಕಳಕ್ಕೆ ರಸ್ತೆ ಕಾಮಗಾರಿಗೆ ಮೋರಿಯನ್ನು ಸಾಗಿಸುತ್ತಿದ್ದ ಟ್ರಕ್ ಗೆ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಅರುಣ ಇಂಡಸ್ಟ್ರಿ ಕಂಪನಿಯ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗೂಡ್ಸ್ ರಿಕ್ಷಾ ಹಾನಿಯಾಗಿದ್ದುಬಚಾಲಕ ವಿಶ್ವನಾಥ್ ಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿ ಪತ್ನಿ ವಸಂತಿ (35)  ಹಾಗೂ ಪತ್ನಿಯ ತಂಗಿ ಕೃತಿಕಾ (18) ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಅಪಘಾತದಿಂದ ಗಂಟೆಗಂಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರಿಗೆ ತೊಂದರೆ ಉಂಟಾಯಿತು . ತಕ್ಷಣ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

- Advertisement -

Latest News

error: Content is protected !!