Saturday, June 6, 2026
Homeಕೊಡಗುಮೆಕ್ಕಾಗೆ ತೆರಳಿದ್ದ ಯುವಕ‌ ಹೃದಯಾಘಾತದಿಂದ ನಿಧನ

ಮೆಕ್ಕಾಗೆ ತೆರಳಿದ್ದ ಯುವಕ‌ ಹೃದಯಾಘಾತದಿಂದ ನಿಧನ

- Advertisement -
- Advertisement -

ಕೊಡಗು; ಮೆಕ್ಕಾಗೆ ಉಮ್ರಾ ಯಾತ್ರೆ ತೆರಳಿದ್ದ ಕೊಡಗಿನ ಯುವಕ ಮೆಕ್ಕಾದ ಸಮೀಪದ ಹೊಟೇಲ್ ನಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಕೊಡಗಿನ ಸುಂಟಿಕೊಪ್ಪ ನಿವಾಸಿ ರಫೀಕ್‌ ಹಸನ್(34) ಮೃತ ದುರ್ದೈವಿ.ದಮ್ಮಾಮ್ ನಿಂದ ಮದೀನಾ ಮತ್ತು ಮೆಕ್ಕಾಗೆ ಉಮ್ರಾ ನಿರ್ಮಿಸಲು ರಫೀಕ್ ತೆರಳಿದ್ದು, ಮೆಕ್ಕಾದ ಬಳಿ ಹೊಟೇಲ್ ನಲ್ಲಿ ತಂಗಿದ್ದರು.ಈ ವೇಳೆ ನಿದ್ರೆಯಲ್ಲಿರುವಾಗ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ರಫೀಕ್ ಎದ್ದೇಳದಿದ್ದಾಗ ಅವರ ಗೆಳೆಯರು ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಮೃತದೇಹವನ್ನು‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ರಫೀಕ್ ಪತ್ನಿ‌ ಮತ್ತು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!