Thursday, June 4, 2026
Homeತಾಜಾ ಸುದ್ದಿಅಕ್ರಮ ಹಣ ವರ್ಗಾವಣೆ ಪ್ರಕರಣದ ರದ್ದು ಕೋರಿ ಡಿಕೆಶಿ ಅರ್ಜಿ: ಇಡಿಗೆ ನೋಟಿಸ್ ಜಾರಿ ಮಾಡಿದ...

ಅಕ್ರಮ ಹಣ ವರ್ಗಾವಣೆ ಪ್ರಕರಣದ ರದ್ದು ಕೋರಿ ಡಿಕೆಶಿ ಅರ್ಜಿ: ಇಡಿಗೆ ನೋಟಿಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

- Advertisement -
- Advertisement -

ನವದೆಹಲಿ: ತನ್ನ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿಯನ್ನು ಮಾಡಿದ್ದರು. ಆ ಮನವಿ ಮೇರೆಗೆ ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. 

ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಮತ್ತು ನ್ಯಾ.ಅನೀಶ್ ದಯಾಳ್ ಪೀಠ ಪ್ರಕರಣ ಬಗ್ಗೆ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಿದೆ. ಡಿಸೆಂಬರ್ 15ಕ್ಕೆ ಪ್ರಕರಣದ ಹೆಚ್ಚುವರಿ ವಿಚಾರಣೆಗಾಗಿ ಮುಂದೂಡಲಾಗಿದೆ. ಪ್ರಕರಣದ ರದ್ದು ಕೋರಿರುವ ಡಿ.ಕೆ ಶಿವಕುಮಾರ್, ಅರ್ಜಿಯಲ್ಲಿ ಪಿಎಂಎಲ್‍ಎ ಸೆಕ್ಷನ್ 13 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!