Thursday, June 4, 2026
Homeತಾಜಾ ಸುದ್ದಿಪ್ರವೀಣ್‌ ನೆಟ್ಟಾರು ಹೊಸ ಮನೆಗೆ ಗುದ್ದಲಿ ಪೂಜೆ ನೆರವೇರಿಸಿದ ಕಟೀಲ್‌

ಪ್ರವೀಣ್‌ ನೆಟ್ಟಾರು ಹೊಸ ಮನೆಗೆ ಗುದ್ದಲಿ ಪೂಜೆ ನೆರವೇರಿಸಿದ ಕಟೀಲ್‌

- Advertisement -
- Advertisement -

ಮಂಗಳೂರು: ಪ್ರವೀಣ್ ನೆಟ್ಟಾರು ‌ಹಳೆಯ ಮನೆ ಕೆಡವಿ ಇಂದು ಹೊಸ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಗುದ್ದಲಿ ಪೂಜೆ ನೆರವೇರಿಸಿದ್ರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್, ಪ್ರವೀಣ್‌ ನೆಟ್ಟಾರು ಹೊಸ ಮನೆ ಕಟ್ಟಬೇಕೆಂದು ಕನಸು ಹೊತ್ತಿದ್ರು. ಅವರ ಕನಸನ್ನು ಬಿಜೆಪಿ ಪಕ್ಷ ನನಸು ಮಾಡಲು ಹೊರಟಿದೆ. ಪ್ರವೀಣ್‌ ಬಿಜೆಪಿ ಪಕ್ಷಕ್ಕಾಗಿ ಬಹಳ ಶ್ರಮಿಸಿದ್ದಾರೆ. ಹಾಗಾಗಿ ಅವರ ಕುಟುಂಬದ ಪರ ಪಕ್ಷ ನಿಂತಿದೆ ಅಂದ್ರು. 60 ಲಕ್ಷ ವೆಚ್ಚದಲ್ಲಿ 2700 ಚ.ಅಡಿಯ ಮನೆ ನಿರ್ಮಾಣ ಆಗಲಿದೆ. ಮುಗ್ರೋಡಿ ಕನ್ಸ್ಟ್ ಕ್ಷನ್ ಕಂಪೆನಿ ಮೇ ಅಂತ್ಯದ ಒಳಗೆ ಮನೆ ನಿರ್ಮಾಣ ಮಾಡಿ ಕೊಡಲಿದೆ ಎಂದರು.




- Advertisement -

Latest News

error: Content is protected !!