- Advertisement -
![]()
- Advertisement -
ಉಡುಪಿ: ಖಂಡಗ್ರಾಸ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಧ್ಯಾನ, ಜಪ, ಪಾರಾಯಣ ನಡೆಯಿತು.
ಗ್ರಹಣ ಮೋಕ್ಷವಾಗುತ್ತಿದ್ದಂತೆಯೇ ಮಧ್ವ ಸರೋವರದಲ್ಲಿ ಪುಣ್ಯ ಸ್ನಾನ ನಡೆದು, ಯತಿಗಳು ಮತ್ತು ಭಕ್ತರಿಂದ ಪುಣ್ಯಸ್ನಾನ ಮಾಡಿದರು.
ಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರು ಮಹಾಪೂಜೆ ಪೂರ್ಣಗೊಳಿಸಿದ್ದು, ಇನ್ನು ನಾಳೆ ಮುಂಜಾನೆ ಪೂಜೆ ನಡೆಯಲಿದೆ.
ಗ್ರಹಣದ ಹಿನ್ನೆಲೆಯಲ್ಲಿ ಹಲವು ಭಕ್ತರು ಮಧ್ವ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ತೆರಳಿದ್ದಾರೆ.
- Advertisement -


