Monday, June 29, 2026
Homeತಾಜಾ ಸುದ್ದಿಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಕೊನೆಯ ಪಂಕ್ತಿಯಲ್ಲಿ ಊಟ ಹಾಕ್ತಾರೆ, ಅಲ್ಲಿ ಎಂಜಲು‌ ತಿನ್ಬೇಕು!: ದಾವಣಗೆರೆಯಲ್ಲಿ ಜೆಡಿಎಸ್...

ಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಕೊನೆಯ ಪಂಕ್ತಿಯಲ್ಲಿ ಊಟ ಹಾಕ್ತಾರೆ, ಅಲ್ಲಿ ಎಂಜಲು‌ ತಿನ್ಬೇಕು!: ದಾವಣಗೆರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ

- Advertisement -
- Advertisement -

ದಾವಣಗೆರೆ: ಕಾಂಗ್ರೆಸ್ ನಲ್ಲಿ ಮುಸ್ಲಿಮರಿಗೆ ಊಟದ ಕೊನೆಯ ಪಂಕ್ತಿಯಲ್ಲಿ ಊಟಕ್ಕೆ ಹಾಕುತ್ತಾರೆ,‌ ಅಲ್ಲಿ ಎಂಜಲು ತಿನ್ನಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.‌ ಇಬ್ರಾಹಿಂ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ರಾಜ್ಯದಲ್ಲಿ ಯಾವುದೇ ಪಕ್ಷ ಮುಸ್ಲಿಂ ಮುಖಂಡರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ,‌ ಆದ್ರೆ ಜೆಡಿಎಸ್ ಪಕ್ಷ ಮಾತ್ರ ಮುಸ್ಲಿಂ‌ ಮುಖಂಡನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ ಎಂದು ಹೇಳಿದ್ದಾರೆ.‌

ಈ ಹಿಂದೆ ದೇವೇಗೌಡರು ಮಿರಾಜುದ್ದೀನ್ ಪಟೇಲ್ ಎಂಬ ಮುಸ್ಲಿಂ ಮುಖಂಡರಿಗೆ ರಾಜ್ಯಾಧ್ಯಕ್ಷ ಮಾಡಿದ್ದರು. ಈಗ ನನಗೆ ಆ ಸ್ಥಾನ ಸಿಕ್ಕಿದೆ ಎಂದು ಹೇಳಿರುವ ಇಬ್ರಾಹಿಂ, ನಾನು‌ ಜೋಳಿಗೆ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಸುತ್ತಿ ಜನರ ಬಳಿ ಹೋಗಿ ಭಿಕ್ಷೆ ಬೇಡುತ್ತೇನೆ ಎಂದಿದ್ದಾರೆ.

- Advertisement -

Latest News

error: Content is protected !!